ದ.ಕ.ಜಿಲ್ಲಾಧ್ಯಕ್ಷರಾಗಿ ನಿಂಗರಾಜು ಕೆ.ಪಿ.ಪುನರಾಯ್ಕೆ, ಪ್ರಧಾನ ಕಾರ್ಯದರ್ಶಿ: ಪುಟ್ಟರಂಗನಾಥ, ಖಜಾಂಜಿ: ಚಂದ್ರಶೇಖರ ಪಾರಪ್ಪಾಡಿ
ಪುತ್ತೂರು: ಕರ್ನಾಟಕ ರಾಜ್ಯ ಸರಕಾರಿ ಹಿರಿಯ ಹಾಗೂ ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ದ.ಕ.ಜಿಲ್ಲಾಘಟಕದ ಅಧ್ಯಕ್ಷರಾಗಿ ಸವಣೂರು ಸರಕಾರಿ ಉನ್ನತ ಹಿ.ಪ್ರಾ.ಶಾಲಾ ಮುಖ್ಯಶಿಕ್ಷಕ ನಿಂಗರಾಜು ಕೆ.ಪಿ. ಅವಿರೋಧವಾಗಿ ಪುನರಾಯ್ಕೆಗೊಂಡಿದ್ದಾರೆ.
ಮಾ.8ರಂದು ಪುತ್ತೂರು ರಾಜ್ಯ ಸರಕಾರಿ ನೌಕರರ ಭವನದಲ್ಲಿ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ಹಿರಿಯ ಹಾಗೂ ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘ ಬೆಂಗಳೂರು ಇದರ ಜಿಲ್ಲಾ ಘಟಕದ ಪುನರ್ ರಚನಾ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಪ್ರಧಾನ ಕಾರ್ಯದರ್ಶಿಯಾಗಿ ಕೆದಿಲ ಗಡಿಯಾರ ಸರಕಾರಿ ಉ.ಹಿ.ಪ್ರಾ.ಶಾಲೆಯ ಪುಟ್ಟರಂಗನಾಥ ಟಿ., ಜಿಲ್ಲಾ ಖಜಾಂಚಿಯಾಗಿ ಸುಳ್ಯ ನಡುಗಲ್ಲು ಸರಕಾರಿ ಹಿ.ಪ್ರಾ.ಶಾಲೆಯ ಚಂದ್ರಶೇಖರ್ ಪಾರಪ್ಪಾಡಿ ಆಯ್ಕೆಯಾಗಿದ್ದಾರೆ. ಉಳಿದಂತೆ ಗೌರವಾಧ್ಯಕ್ಷರಾಗಿ ನಾರಾಯಣ ಪೂಜಾರಿ ಎಸ್.ಕೆ., ಉಪಾಧ್ಯಕ್ಷರಾಗಿ ಬಂಟ್ವಾಳ ಕಾವಳಪಡೂರು ಸರಕಾರಿ ಹಿ.ಪ್ರಾ.ಶಾಲೆಯ ಪ್ರೇಮಾ ಕೆ.ಕೆ., ಸುಳ್ಯ ಅರಂತೋಡು ಸರಕಾರಿ ಹಿ.ಪ್ರಾ.ಶಾಲೆಯ ಗೋಪಾಲಕೃಷ್ಣ ಬಿ.ಕೆ., ಸಹ ಕಾರ್ಯದರ್ಶಿಯಾಗಿ ಬೆಳ್ತಂಗಡಿ ಪಡಂಗಡಿ ಸರಕಾರಿ ಉ.ಹಿ.ಪ್ರಾ.ಶಾಲೆಯ ಮಂಜುಳಾ ಜೆ.ಟಿ., ಬೆಳ್ತಂಗಡಿ ಮಾವಿನಕಟ್ಟೆ ಸರಕಾರಿ ಉ.ಹಿ.ಪ್ರಾ.ಶಾಲೆಯ ಉಮೇಶ ನಾಯ್ಕ, ಸಂಘಟನಾ ಕಾರ್ಯದರ್ಶಿಯಾಗಿ ಬಿಳಿನೆಲೆ ಬೈಲು ಸರಕಾರಿ ಹಿ.ಪ್ರಾ.ಶಾಲೆಯ ವಾರಿಜಾ ಬಿ., ಬಜತ್ತೂರು ಸರಕಾರಿ ಹಿ.ಪ್ರಾ.ಶಾಲೆಯ ಮಂಜುನಾಥ, ನಿರ್ದೇಶಕರಾಗಿ ಕೆಮ್ಮಾಯಿ ಸರಕಾರಿ ಉ.ಹಿ.ಪ್ರಾ.ಶಾಲೆಯ ಮರಿಯಮ್ಮ ಪಿ.ಎಸ್., ಕಡಬ ಸರಕಾರಿ ಹಿ.ಪ್ರಾ.ಶಾಲೆಯ ಆನಂದ ಅಜಿಲ, ವೀರಮಂಗಲ ಸರಕಾರಿ ಹಿ.ಪ್ರಾ.ಶಾಲೆಯ ತಾರಾನಾಥ ಸವಣೂರು ಆಯ್ಕೆಗೊಂಡರು.
ಹಾಲಿ ಅಧ್ಯಕ್ಷ ನಿಂಗರಾಜು ಕೆ.ಪಿ.ಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯ ಕಾರ್ಯಕಾರಣಿ ಸಮಿತಿಯ ಸಂಘಟನಾ ಕಾರ್ಯದರ್ಶಿ ನಟರಾಜು ಮತ್ತು ಮೈಸೂರು ವಿಭಾಗ ಮಟ್ಟದ ಪ್ರಧಾನ ಕಾರ್ಯದರ್ಶಿ ಶಿವಲಿಂಗರಾಜು ಇವರ ಮಾರ್ಗದರ್ಶನದಲ್ಲಿ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಜಿಲ್ಲೆಯ 60ಕ್ಕೂ ಹೆಚ್ಚು ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರು ಈ ಸಭೆಯಲ್ಲಿ ಭಾಗವಹಿಸಿದ್ದರು. ಗೋಪಾಲಕೃಷ್ಣ ಬಿ.ಕೆ. ನಿರೂಪಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಂಗರಾಜು ಕೆ.ಪಿ. ಸ್ವಾಗತಿಸಿದರು. ಪುಟ್ಟರಂಗನಾಥ ಟಿ. ವಂದಿಸಿದರು.