ಉಪ್ಪಿನಂಗಡಿ: ಪುರಾಣ ಪ್ರಸಿದ್ಧ ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಕಾಲಾವಧಿ ಜಾತ್ರೆ, ಮಖೆ ಜಾತ್ರೆ ಮತ್ತು ಉತ್ಸವಾದಿಗಳ ಅಂಗವಾಗಿ ಮಾ.11ರಂದು ದೇವಾಲಯದಲ್ಲಿ ಧ್ವಜಾರೋಹಣ ಕಾರ್ಯಕ್ರಮವು ನಡೆಯಿತು.
ದೇವಳದ ತಂತ್ರಿಗಳಾದ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆದ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಬೆಳಗ್ಗೆ ಧ್ವಜಾರೋಹಣ ನಡೆಸಲಾಯಿತು. ಬಳಿಕ ರಾತ್ರಿ ಉತ್ಸವ ನಡೆಯಿತು.
ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾೖಕ್ , ಕಾರ್ಯನಿರ್ವಹಣಾಧಿಕಾರಿ ಚೆನ್ನಪ್ಪ ಗೌಡ , ದೇವಾಲಯದ ಪ್ರಧಾನ ಅರ್ಚಕ ಕೆ. ಹರೀಶ್ ಉಪಾಧ್ಯಾಯ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಸೋಮನಾಥ, ಅನಿತಾ ಕೇಶವ ಗೌಡ, ಬಿ ಗೋಪಾಲಕೃಷ್ಣ ರೈ, ಜಿ. ಕೃಷ್ಣ ರಾವ್ ಆರ್ತಿಲ, ದೇವಿದಾಸ್ ರೈ ಬಿ., ಎಂ. ವೆಂಕಪ್ಪ ಪೂಜಾರಿ, ಮಾಜಿ ಅಧ್ಯಕ್ಷ ಕರುಣಾಕರ ಸುವರ್ಣ, ಮಾಜಿ ಸದಸ್ಯರಾದ ಕಂಗ್ವೆ ವಿಶ್ವನಾಥ ಶೆಟ್ಟಿ, ಸುಂದರ ಗೌಡ, ಪ್ರಮುಖರಾದ ರಾಮಚಂದ್ರ ಮಣಿಯಾಣಿ, ಕೈಲಾರ್ ರಾಜಗೋಪಾಲ ಭಟ್, ವ್ಯವಸ್ಥಾಪಕರಾದ ವೆಂಕಟೇಶ್ ರಾವ್, ಸಿಬ್ಬಂದಿಗಳಾದ ಪದ್ಮನಾಭ ಕುಲಾಲ್, ಕೃಷ್ಣಪ್ರಸಾದ್ ಬಡಿಲ, ದಿವಾಕರ ಗೌಡ, ಸುಧಾಕರ ಶೆಟ್ಟಿ, ಗಿರೀಶ್ ಮೊದಲಾದವರು ಉಪಸ್ಥಿತರಿದ್ದರು.