ಒಟ್ಟು 15 ಸ್ಥಾನಗಳಲ್ಲಿಯೂ ಬಿಜೆಪಿ ಬೆಂಬಲಿತ ಸಹಕಾರ ಭಾರತೀಯ ಅಭ್ಯರ್ಥಿಗಳ ಜಯಭೇರಿ
ವಿಟ್ಲ: ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನ ಆಡಳಿತ ಮಂಡಳಿಯ ಚುನಾವಣೆಯು ಮಾ. 9 ರಂದು ವಿಟ್ಲ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಇದರಲ್ಲಿ 6 ಮಂದಿ ಅವಿರೋಧ ಆಯ್ಕೆ ಯಾಗಿದ್ದು, ಉಳಿದ 9 ಸ್ಥಾನಗಳಲ್ಲಿಯೂ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಅಭ್ಯರ್ಥಿಗಳು ವಿಜಯಿಯಾಗಿದ್ದಾರೆ.
ಒಟ್ಟು 15 ಸ್ಥಾನಗಳಿಗೆ 28 ನಾಮಪತ್ರ ಸಲ್ಲಿಕೆಯಾಗಿದ್ದು, ಈ ಪೈಕಿ 2 ನಾಮಪತ್ರ ತಿರಸ್ಕೃತಗೊಂಡು 7 ಮಂದಿ ನಾಮಪತ್ರ ಹಿಂಪಡೆದುಕೊಂಡಿದ್ದರು, 6 ಅಭ್ಯರ್ಥಿಗಳ ಅವಿರೋಧ ಆಯ್ಕೆ ನಡೆದಿತ್ತು, ಉಳಿದ 9 ಸ್ಥಾನಗಳಿಗೆ 13 ಮಂದಿ ಅಂತಿಮ ಕಣದಲ್ಲಿದ್ದರು.
ಸಾಮಾನ್ಯ ಕ್ಷೇತ್ರದಿಂದ ಕೇಶವ ಎ, ಗೋವರ್ಧನ್ ಕುಮಾರ್ ಐ, ಭಾಸ್ಕರ ಶೆಟ್ಟಿ, ರಾಮದಾಸ್ ಶೆಣೈ ವಿ, ಮನೋರಂಜನ್.ಕೆ.ಆರ್, ಮೋಹನ್ ಕೆ ಎಸ್, ವಿಶ್ವನಾಥ.ಎಂ, ತಿರುಮಲೇಶ್ವರ ಭಟ್ ಪಿ, ಸತೀಶ್ ಪಿ.ರವರು ಚುನಾವಣೆಯಲ್ಲಿ ವಿಜೇತರಾದರು. ಮಹಿಳಾ ಮೀಸಲು ಕ್ಷೇತ್ರದಿಂದ ಜಯಂತಿ.ಹೆಚ್ ರಾವ್ ಹಾಗೂ ಶುಭಲಕ್ಷ್ಮಿ, ಹಿಂದುಳಿದ ಪ್ರವರ್ಗ ‘ಎ’ ಮೀಸಲು ಕೇತ್ರದಿಂದ ಜಗನ್ನಾಥ ಸಾಲಿಯಾನ್.ಹೆಚ್, ಹಿಂದುಳಿದ ಪ್ರವರ್ಗ ‘ಬಿ’ ಮೀಸಲು ಕೇತ್ರದಿಂದ ದಯಾನಂದ ಆಳ್ವ ಕೆ, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಪೂವಪ್ಪ ಎಸ್, ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ದಿವಾಕರ ವಿ.ರವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚಿತ್ತರಂಜನ್ ಎನ್. ಎಸ್., ಡಿ, ಜಯರಾಮ ಪೂಜಾರಿ, ದಿನಕರ ಆಳ್ವ ಕೆ. ಹಾಗೂ ಸುರೇಶ್ ಬಿ. ರವರು ಸ್ಪರ್ಧಿಸಿದ್ದರು.
ರಿಟರ್ನಿಂಗ್ ಅಧಿಕಾರಿಯಾಗಿ ಮಂಗಳೂರಿನ ಸಹಕಾರ ಸಂಘಗಳ ಉಪನಿಬಂಧಕರ ಕಛೇರಿಯ ಸಹಕಾರ ಅಭಿವೃದ್ಧಿ ಅಧಿಕಾರಿ ಶಿವಲಿಂಗಯ್ಯ ಎಂ, ರವರು ಚುನಾವಣೆ ನಡೆಸಿಕೊಟ್ಟರು. ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಕೃಷ್ ಮುರಳಿ ಶ್ಯಾಮ್ ಕೆ. ಹಾಗೂ ಸಿಬ್ಬಂದಿಗಳು ಸಹಕರಿಸಿದರು.