ಉಪ್ಪಿನಂಗಡಿ: ಈ ಭಾಗದಲ್ಲಿ ರಾತ್ರಿ ಎಂಟೂವರೆಯಿಂದ ಸುಮಾರು ಅರ್ಧಗಂಟೆಗಳ ಕಾಲ ಮಳೆ ಸುರಿದಿದ್ದು, ಸುಡು ಬಿಸಿಲ ಝಳಕ್ಕೆ ಕಾದ ಕಾವಳಿಯಂತಾಗಿದ್ದ ಭೂಮಿಗೆ ಮಳೆರಾಯ ತಂಪೆರೆದಿದ್ದಾನೆ.
ಈ ಭಾಗದಲ್ಲಿ ನಿನ್ನೆ 41 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದರೆ, ಮಾ.12ರಂದು 40 ಡಿಗ್ರಿ ಸೆ. ದಾಖಲಾಗಿತ್ತು. ವಾತಾವರಣದಲ್ಲಿ ಸುಡುವ ಬಿಸಿಲು, ಬಿಸಿಗಾಳಿಯಿಂದಾಗಿ ಮಧ್ಯಾಹ್ನದ ಹೊತ್ತಿಗೆ ಭೂಮಿ ಸುಡವ ಕಾವಲಿಯ ಹಾಗೆ ಬದಲಾಗುತ್ತಿತ್ತು. ಸಂಜೆಯಿಂದಲೇ ಸಣ್ಣ ಪ್ರಮಾಣದಲ್ಲಿ ಗುಡುಗು ಕಾಣಿಸಿಕೊಂಡಿದ್ದು, ರಾತ್ರಿ ಸುಮಾರು ಅರ್ಧ ಗಂಟೆಯಷ್ಟು ಉತ್ತಮ ಮಳೆಯಾಗಿದ್ದರಿಂದ ವಾತಾವರಣ ಸ್ವಲ್ಪ ಮಟ್ಟಿಗೆ ತಂಪಾಗಿದೆ.