ಸ್ಕೇಲ್ ವ್ಯವಹಾರದಲ್ಲಿ 25 ವರ್ಷದ ಅನುಭವ…- ಶೀಘ್ರದಲ್ಲೇ 3ನೇ ಯ ಶಾಖೆಯನ್ನು ತೆರೆಯಲಿರುವ ಸಂಸ್ಥೆ…

0

ಪುತ್ತೂರು: ಹೆಸರಾಂತ ಕಂಪೆನಿಯ ತೂಕದ ಯಂತ್ರಗಳ ಮಾರಾಟ ಹಾಗೂ ಸೇವೆ ಮೂಲಕ ಗ್ರಾಹಕ ವರ್ಗದ ಪ್ರೀತಿ, ವಿಶ್ವಾಸಗಳಿಸಿರುವಂತ, ಸುಮಾರು 25 ವರುಷಗಳ ಅನುಭವ ಹೊಂದಿರುವ ದರ್ಬೆ ಮೊಯಿದ್ದೀನ್ ಕಾಂಪ್ಲೆಕ್ಸ್‌ನಲ್ಲಿ ಕಳೆದ 17 ವರುಷಗಳಿಂದ ವ್ಯವಹರಿಸುತ್ತಿರುವ ಬಿ.ಎಂ.ಶಮೀರ್ ಮಾಲೀಕತ್ವದ ಎಸ್.ಎಸ್.ಸ್ಕೇಲ್ ಬಜ್ಹಾರ್ ಇದೀಗ 18ನೇ ಯ ವಾರ್ಷಿಕೋತ್ಸವವನ್ನು ಮೆಚ್ಚಿನ ಗ್ರಾಹಕ ವರ್ಗಕ್ಕೆ ಗರಿಷ್ಠ ಮಟ್ಟದ ಕೊಡುಗೆ ನೀಡುವ ಮೂಲಕ ವಿಭಿನ್ನ ರೀತಿ ಆಚರಣೆ ಮಾಡಿದೆ.

ಬೆಳ್ತಂಗಡಿ ತಾಲೂಕಿನ ಉಜಿರೆ ಮತ್ತು ಕಡಬದಲ್ಲೂ ಶಾಖೆ ಹೊಂದಿರುವ ಸಂಸ್ಥೆಯು ಸ್ಕೇಲ್ ವ್ಯವಹಾರದಲ್ಲಿ ಸರಕಾರದ ಮಾನ್ಯತೆ ಪಡೆದಿರುವ ಸಂಸ್ಥೆಯಾಗಿದ್ದು, ಶೀಘ್ರದಲ್ಲೇ ಮೂರನೇಯ ಶಾಖೆಯನ್ನು ಪ್ರಾರಂಭಿಸಲಿದೆ. ಅತ್ಯುತ್ತಮ ಗುಣಮಟ್ಟ ಹಾಗೂ ದೀರ್ಘ ಬಾಳ್ವಿಕೆ ಬರುವಂತಹ ಹಲವು ಮಾದರಿಯ ತೂಕದ ಯಂತ್ರ, ವಾರಂಟಿಯೊದಿಗೆ ಹಾಗೂ ನಿಗದಿತ ಸಮಯ ಮಿತಿಯೊಳಗೆ ಅವುಗಳ ದುರಸ್ತಿ ಕಾರ್ಯವನ್ನು ಕೂಡ ಸಂಸ್ಥೆ ಗ್ರಾಹಕರಿಗೆ ಒದಗಿಸಿಕೊಡುವಲ್ಲೂ ಸೈ ಎನಿಸಿಕೊಂಡಿದೆ.

ಯೋಗ್ಯ ರೀತಿಯ ಬೆಲೆಯೊಂದಿಗೆ, ಸರಳ, ಸುಲ ರೀತಿಯ ಕಂತು ಮೂಲಕ ಪಾವತಿ ಮತ್ತು ಉಚಿತ ಸಾಗಾಟ ವ್ಯವಸ್ಥೆ ಜೊತೆಗೆ ತಾವಿದ್ದಲ್ಲಿಗೆ ಮೊಬೈಲ್ ಸರ್ವಿಸ್ ಸೇವೆಯನ್ನೂ ಸಹ ಸಂಸ್ಥೆ ನೀಡುತ್ತಿದೆ. ಪ್ರಮುಖ ಕಂಪೆನಿಗಳಾದ ಎಸ್ಸೇ, ಟೈಕೂನ್, ಯಶಸ್ವಿನಿ, ಡಿ ಸೊನಿಕ್ ಹಾಗೂ ಒರಿಯನ್ ಕಂಪನಿಯ ಇಲೆಕ್ಟ್ರಾನಿಕ್ ತೂಕದ ಯಂತ್ರಗಳ ಜತೆಗೆ ಮೆಕ್ಸಿಗೋ ಮತ್ತು ಮ್ಯಾಕ್ಸೆಲ್ ಕರೆನ್ಸಿ ಕೌಂಟಿಂಗ್ ಯಂತ್ರಗಳು , ಎಂ.ಜಿ.ತೂಕದ ಯಂತ್ರಗಳೂ ಮಳಿಗೆಯಲ್ಲಿ ಲಭ್ಯವಿದೆ.
ಹದಿನೆಂಟನೇ ವಾರ್ಷಿಕೋತ್ಸವದ ಸಲುವಾಗಿ ಗ್ರಾಹಕರಿಗೆ ಶೇಕಡಾ 25 ರಿಯಾಯಿತಿ ಘೋಷಣೆ ಮಾಡಿದೆ.
ಗ್ರಾಹಕರು ಇದರ ಪ್ರಯೋಜನ ಪಡೆಯುವಂತೆ ಮಾಲೀಕರು ವಿನಂತಿಸಿದ್ದಾರೆ.

ಕೃಷಿ ವರ್ಗಕ್ಕೆ 25% ರಿಯಾಯಿತಿ ಜೊತೆಗೆ 3 ನೇ ಶಾಖೆ ಪ್ರಾರಂಭ…
17 ವರ್ಷದ ಹಿಂದೆ ಪ್ರಾರಂಭಗೊಂಡ ಸಂಸ್ಥೆಗೆ ಎಲ್ಲಾ ವರ್ಗದ ಗ್ರಾಹಕರ ಬೆಂಬಲ, ಪ್ರೋತ್ಸಾಹ ಅಭಿವೃದ್ಧಿ ಗೆ ಸಹಕಾರಿಯಾಗಿದೆ.
10 ವರ್ಷದಿಂದ ಉಜಿರೆಯಲ್ಲಿ ಮತ್ತು 5 ವರ್ಷದಿಂದ ಕಡಬದಲ್ಲೂ ಶಾಖೆಯನ್ನು ಪ್ರಾರಂಭಿಸಿದ್ದೇವೆ. ಇದೀಗ ಸದ್ಯದಲ್ಲೇ ನಮ್ಮ 3ನೇಯ ಶಾಖೆಯೂ ಕೂಡ ಪ್ರಾರಂಭಗೊಳ್ಳಲಿದೆ. ಕೃಷಿ ವರ್ಗದ ಗ್ರಾಹಕರಿಗೆ 25 ಶೇಕಡಾ ರಿಯಾಯಿತಿ ಕೂಡ ಸಂಸ್ಥೆ ಘೋಷಣೆ ಮಾಡಿದೆ. ಎಂದಿನಂತೆ ತಮ್ಮ ಪ್ರೀತಿ, ಬೆಂಬಲ, ಸಹಕಾರ ಇರಲಿ…
ಬಿ.ಎಂ.ಸಮೀರ್
ಮಾಲಕರು

LEAVE A REPLY

Please enter your comment!
Please enter your name here