ಅರಿಯಡ್ಕ ಪನೆಕ್ಕಳ ಶ್ರೀ ಮಹಾಮಾರಿಯಮ್ಮ ಶ್ರೀ ಅಮ್ಮನವರ ಕ್ಷೇತ್ರಕ್ಕೆ ಧರ್ಮಸ್ಥಳ ಕ್ಷೇತ್ರದಿಂದ ಧನ ಸಹಾಯ ಹಸ್ತಾಂತರ

0

ಬಡಗನ್ನೂರು : ಅರಿಯಡ್ಕ ಗ್ರಾಮದ ಜಾರತ್ತಾರು ಪನೆಕ್ಕಳ ಶ್ರೀ ಮಹಾಮಾರಿಯಮ್ಮ ಶ್ರೀ ಅಮ್ಮನವರ ಹಾಗೂ ಸಹಪರಿವಾರ ದೈವಗಳ ದೈವಸ್ಥಾನಗಳ  ಅಭಿವೃದ್ಧಿ ಕಾರ್ಯಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನೀಡಿದ ಡಿ ಡಿ ಯನ್ನು ತಾಲೂಕು ಯೋಜನಾಧಿಕಾರಿ ಶಶಿಧರ್ ರವರು ದೈವಸ್ಥಾನದ ಸಮಿತಿಗೆ ಹಸ್ತಾಂತರಿಸಿ, ಶುಭ ಹಾರೈಸಿದರು.

ಪುನರ್ ಪ್ರತಿಷ್ಠ ಬ್ರಹ್ಮಕಲಶೋತ್ಸವ
ಪುನರ್ ಪ್ರತಿಷ್ಠ ಬ್ರಹ್ಮಕಲಶೋತ್ಸವ ಹಾಗೂ ಮಾರಿಪೂಜೆಯು ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ಶ್ರೀ ವಾಸುದೇವ ತಂತ್ರಿವರ್ಯರ ಆಶೀರ್ವಾದಗಳೊಂದಿಗೆ ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ಶ್ರೀ ರವೀಶ ತಂತ್ರಿವರ್ಯರ ನೇತೃತ್ವದಲ್ಲಿ ಮಾ. 15ರಿಂದ 17 ರ ಪನೆಕ್ಕಳ ಶ್ರೀ ಮಹಾಮಾರಿಯಮ್ಮ ಶ್ರೀ ಅಮ್ಮನವರ ವಠಾರದಲ್ಲಿ ನಡೆಯಲಿದೆ. 

ಗೌರವ ಸಲಹೆಗಾರ ಶ್ರೀರಾಮ್ ಪಕ್ಕಳ ಅರಿಯಡ್ಕ,ವಿನೋದ್ ಶೆಟ್ಟಿ ಅರಿಯಡ್ಕ,ಅಧ್ಯಕ್ಷ ನಾರಾಯಣ ಪೂಜಾರಿ ಮಡ್ಯಂಗಳ , ಪ್ರಧಾನ ಕಾರ್ಯದರ್ಶಿ ಸಾರ್ಥಕ್ ರೈ ಅರಿಯಡ್ಕ , ಕೋಶಾಧಿಕಾರಿ ಶರತ್ ಕುಮಾರ್ , ಜೊತೆ ಕಾರ್ಯದರ್ಶಿ ಗಿರೀಶ್ ಜಾರತ್ತಾರು ,  ಪ್ರಧಾನ ಅರ್ಚಕ ನಾರಾಯಣ ಜಾರತ್ತಾರು, ಕುಂಬ್ರ ವಲಯದ ಮೇಲ್ವಿಚಾರಕಿ ಮೋಹಿನಿ ಎಸ್ ಗೌಡ,ಕುಂಬ್ರ ವಲಯ ಅಧ್ಯಕ್ಷ  ಮಾಧವ ರೈ ಕುಂಬ್ರ, ಅರಿಯಡ್ಕ ವಲಯದ ಜನ ಜಾಗೃತಿಯ ಅಧ್ಯಕ್ಷ ವಿಕ್ರಂ ರೈ ಸಾಂತ್ಯ,ಕುಂಬ್ರ ವಲಯದ ಶೇಖಮಲೆ ಕಾರ್ಯ ವ್ಯಾ ಪ್ತಿಯ ಸೇವಾಪ್ರತಿನಿಧಿ ಸವಿತಾ. ಎಸ್.ಸದಸ್ಯರಾದ ಸುರೇಂದ್ರ ಜಾರತ್ತಾರು, ಗುರುವಪ್ಪ ಜಾರತ್ತಾರು, ಕುಂಜಿರ ಜಾರತ್ತಾರು, ಸಮಿತಿಗಳ ಪದಾಧಿಕಾರಿಗಳಾದ ಪ್ರವೀಣ್ ರೈ ಪನೇಕ್ಕಳ, ಅಣ್ಣು ಜಾರತ್ತಾರು,ಚಂದ್ರಹಾಸ ಜಾರತ್ತಾರು, ಗೋಪಾಲ ಜಾರತ್ತಾರು, ಕೇಶವ ಜಾರತ್ತಾರು,  ರಾಮ ಜಾರತ್ತಾರು,  ರಮೇಶ್ ಜಾರತ್ತಾರು,ಅಕ್ಷಯ್ ಜಾರತ್ತಾರು, ವಿನೋದ್ ಜಾರತ್ತಾರು, ಅವಿಶ್ ಜಾರತ್ತಾರು,ಕರುಣಾಕರ ಜಾರತ್ತಾರು, ಗುರು ಪುಣಚ ಮತ್ತಿತರರು ಉಪಸ್ಥಿತರಿದ್ದರು. ಅರಿಯಡ್ಕ ಗ್ರಾ.ಪಂ ಸದಸ್ಯ ಹರೀಶ್ ರೈ ಜಾರತ್ತಾರು ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here