ಕುಂಬ್ರ: ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕೆ ಆಡಳಿತ ಮಂಡಳಿ ಚುನಾವಣೆಯಲ್ಲಿ ನಿರ್ದೇಶಕರಾಗಿ ಆಯ್ಕೆಗೊಂಡ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನಿರ್ದೇಶಕರು ಮತ್ತು ಕುಂಬ್ರ ಶಾಖೆಯ ಸಲಹಾ ಸಮಿತಿಯ ಉಪಾಧ್ಯಕ್ಷರಾಗಿರುವ ಸತೀಶ್ ಪಾಂಬಾರು ಇವರನ್ನು ಕುಂಬ್ರ ಶಾಖಾ ಸಲಹಾ ಸಮಿತಿ ಸಭೆಯಲ್ಲಿ ಶಾಲು ಹಾಕಿ ಹೂಗುಚ್ಛ ನೀಡಿ ಅಭಿನಂದಿಸಲಾಯಿತು.
ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನಿರ್ದೇಶಕರು ಹಾಗೂ ಕುಂಬ್ರ ಶಾಖೆಯ ಸಲಹಾ ಸಮಿತಿ ಅಧ್ಯಕ್ಷರಾದ ಲೋಕೇಶ್ ಚಾಕೋಟೆ ಅಭಿನಂದನಾ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಕುಂಬ್ರ ಶಾಖಾ ಸಲಹಾ ಸಮಿತಿ ಸದಸ್ಯರಾದ ಶಿವರಾಮ ಗೌಡ ಇದ್ಯಾಪೆ, ನಾಗಪ್ಪ ಗೌಡ ಬೊಮ್ಮೆಟ್ಟಿ, ಚಂದ್ರಶೇಖರ ಗೌಡ ಸಾರೆಪ್ಪಾಡಿ, ಶ್ರೀಧರ ಗೌಡ ಎರಕ್ಕಲ, ತಿರುಮಲೇಶ್ವರ ಗೌಡ ದೊಡ್ಡಮನೆ, ರಾಮಕೃಷ್ಣ ಗೌಡ ಸಾಮೆತ್ತಡ್ಕ,ರಾಮಣ್ಣ ಗೌಡ ಬಸವಹಿತ್ಳು,ರೇಖಾ ಆರ್ ಗೌಡ,ವಿಜಯ ಭಾರತಿ ಮಡ್ಯಂಗಳ,ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್ ಕೆ,ಕುಂಬ್ರ ಶಾಖಾ ಮೆನೇಜರ್ ಹರೀಶ್ ವೈ, ಸಿಬ್ಬಂದಿಗಳಾದ ಸಂಧ್ಯಾ ಕೆ,ದಿನೇಶ್ ಕುಮಾರ್ ಬಿ ಉಪಸ್ಥಿತರಿದ್ದರು.