ಪುತ್ತೂರು: ಕಲ್ಲಗುಡ್ಡೆಯಲ್ಲಿ ಏಳನೇ ವರ್ಷದ ದೇವಿ ಮಹಾತ್ಮೆ ಯಕ್ಷಗಾನ ನಡೆಯಿತು.
ಬೆಳಿಗ್ಗೆ ದೇವರಿಗೆ ಮಹಾಪೂಜೆ ಸಂಜೆ ವಿಜ್ರಂಭಣೆಯ ಮೆರವಣಿಗೆಯೊಂದಿಗೆ ದೇವರು ಚೌಕಿಗೆ ಆಗಮಿಸಿ ಸಂಜೆ ಗಂಟೆ 6ಕ್ಕೆ ಗೆ ಚೌಕಿ ಪೂಜೆ ನಡೆದು ನಂತರ ಯಕ್ಷಗಾನ ಪ್ರಾರಂಭವಾಯಿತು.
ಯಕ್ಷಗಾನದ ಪ್ರಯುಕ್ತ ಆಗಮಿಸಿದವರಿಗೆ ದೇವರ ಪ್ರಸಾದ ರೂಪದಲ್ಲಿ ಒಂದು ಸಾವಿರಕ್ಕೂ ಅಧಿಕ ಮಂದಿಗೆ ಅನ್ನ ಸಂತರ್ಪಣೆ ನಡೆಯಿತು. ಸಾಮಾಜಿಕ, ರಾಜಕೀಯ ನಾಯಕರು, ಊರ ಪರವೂರ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಚಂದ್ರಶೇಖರ್ ಕಲ್ಲಗುಡ್ಡೆ ಕೃತಜ್ಞತೆ ಸಲ್ಲಿಸಿದರು.