ಪುತ್ತೂರು: ವೀರಮಂಗಲ ಪಿಎಂಶ್ರೀ ಯೋಜನೆಯ ಪ್ರಮುಖ ಘಟಕವಾದ ಯೂತ್ & ಇಕೊ ಕ್ಲಬ್ ಶುಭಾರಂಭಗೊಂಡಿತು. ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸಲು ಈ ಕ್ಲಬ್ ಕಾರ್ಯ ನಿರ್ವಹಿಸಲಿದ್ದು,ಆಸಕ್ತ 30 ಮಕ್ಕಳ ತಂಡ ಹಸಿರು ಶಾಲೆಯ ಕಲ್ಪನೆಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತದೆ. ಶಾಲಾ ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳ ನಿರ್ದೇಶನದಂತೆ ಶಾಲಾ ಮುಖ್ಯಗುರು ತಾರಾನಾಥ ಪಿ ಇವರ ಮಾರ್ಗದರ್ಶನದಲ್ಲಿ ವಿಜ್ಞಾನ ಶಿಕ್ಷಕಿ ಶಿಲ್ಪರಾಣಿ ಸಂಯೋಜಕಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಪರಿಸರಕ್ಕೆ ಸಂಬಂಧಿಸಿ ಕಸ ವಿಲೇವಾರಿ, ಜನಜಾಗೃತಿ ಕಾರ್ಯಗಳು, ಬೀದಿನಾಟಕ, ವಿಚಾರ ಸಂಕೀರಣ ತಜ್ಞರೊಂದಿಗೆ ಸಂವಾದ, ಕೃಷಿ ಉತ್ಪನ್ನಗಳ ಮಾಹಿತಿ, ಹೊರಸಂಚಾರ ಇತ್ಯಾದಿ ಜನಭಾಗಿಧಾರಿ ಕಾರ್ಯಗಳು ಈ ಕ್ಲಬ್ ಮೂಲಕ ನಡೆಯಲಿದೆ.