ಪುತ್ತೂರು: ನೆಹರುನಗರದ ಕಲ್ಲೇಗ ಗೌಡ ತರವಾಡು ಮನೆಯ ಧರ್ಮದೈವ ರುದ್ರಚಾಮುಂಡಿ ಮತ್ತು ಪರಿವಾರ ದೈವಗಳಾದ ಕಲ್ಲುರ್ಟಿ, ವರ್ಣರ ಪಂಜುರ್ಲಿ, ಕುಪ್ಪೆ ಪಂಜುರ್ಲಿ ಹಾಗು ಗುಳಿಗ ದೈವಗಳ ನೇಮೋತ್ಸವ ಮಾ.23 ಮತ್ತು 24ರಂದು ನಡೆಯಿತು.





ಮಾ.23ರಂದು ರಾತ್ರಿ ಪರಿವಾರ ದೈವಗಳಾದ ವರ್ಣರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ ಮತ್ತು ಗುಳಿಗ ದೈವಗಳ ನೇಮ ನಡೆಯಿತು. ಮಾ.24ರಂದು ಬೆಳಿಗ್ಗೆ ಧರ್ಮದೈವ ರುದ್ರಚಾಮುಂಡಿಯ ನೇಮೋತ್ಸವ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ನೇಮೋತ್ಸವ ಸಂಜೆಯ ತನಕ ನಡೆಯಿತು.