ಪುತ್ತೂರು: ಪ್ರಕೃತಿ ರಮಣೀಯ, ಸುಂದರವಾದ ಬೆಟ್ಟಗುಡ್ಡಗಳಿಂದಾವೃತವಾದ ಹಸಿರುಸಿರಿ ಮೆತ್ತಿಕೊಂಡಿರುವ ವನಗಳಿಂದ ಕಂಗೊಳಿಸುತ್ತಿರುವ ಪ್ರಶಾಂತ ಪರಿಸರವಾಗಿರುವ ಸವಣೂರು ಗ್ರಾಮದ ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಾಲಯದಲ್ಲಿ ವಿಜೃಂಭಣೆಯ 11 ನೇ ವಾರ್ಷಿಕ ಪ್ರತಿಷ್ಠಾ ಮಹೋತ್ಸವ ಬ್ರಹ್ಮಶ್ರೀ ನೀಲೇಶ್ವರ ಆರೋತ್ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು. ಮಾ. 26 ರಂದು ಬೆಳಿಗ್ಗೆ 6 ರಿಂದ ಮಹಾಗಣಪತಿ ಹೋಮ, ನಾಗ ತಂಬಿಲ, ಕಲಶಾಭಿಷೇಕ, ಪಳ್ಳಪೂಜೆ ಸಹಿತ ವೈದಿಕ ಕಾರ್‍ಯಕ್ರಮ, ಮಧ್ಯಾಹ್ನ ಅನ್ನಸಂತರ್ಪಣೆ ಜರಗಿತು.

ದೇವಾಲಯದ ಅರ್ಚಕ ಪದ್ಮನಾಭ ಕುಂಜತ್ತಾಯ, ಪವಿತ್ರಪಾಣಿ ರತ್ನಾಕರ ಕುಂಜತ್ತಾಯ, ಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು, ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ ಕಿನಾರ, ಸದಸ್ಯರುಗಳಾದ ನವೀನ್ ಕುಮಾರ್ ಶೆಟ್ಟಿ ಮುಗೇರುಗುತ್ತು, ಆಶಾ ಪ್ರವೀಣ್ ಕಂಪ, ಶಿವರಾಮ ಗೌಡ ಮೆದು, ಮೋನಪ್ಪ ಗೌಡ ಆರೇಲ್ತಡಿ, ರಾಕೇಶ್ ರೈ ಕೆಡೆಂಜಿ ಹಾಗೂ ಪ್ರೇಮ ಪುಟ್ಟಣ ನಾಯ್ಕ ಆರೇಲ್ತಡಿ, ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಮುಖಂಡರುಗಳು, ಊರ-ಪರವೂರ ಭಕ್ತಾದಿಗಳು ಭಾಗವಹಿಸಿದರು.


ಅರ್ಧ ಏಕಾಹ ಭಜನೆಯ ತಂಡಗಳು
ಮಾ. 25 ರಂದು ಬೆಳಿಗ್ಗೆಯಿಂದ ಸಂಜೆ ತನಕ ನಡೆದ ಅರ್ಧ ಏಕಾಹ ಭಜನೆಯಲ್ಲಿ ಮುಗೇರು ಶ್ರೀ ಮಹಾವಿಷ್ಣು ಭಜನಾ ಮಂಡಳಿ, ಬೆಳಂದೂರು ವಲಯ ಶ್ರೀ ವಿಷ್ಣುಪ್ರಿಯಾ ಭಜನಾ ಮಂಡಳಿ, ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿ, ಚಾರ್ವಾಕ ಶ್ರೀ ಕಪಿಲೇಶ್ವರ ಮಹಿಳಾ ಭಜನಾ ಮಮಡಳಿ, ದೇವಸ್ಯ ಶ್ರೀ ಹರಿ ಭಜನಾ ಮಂಡಳಿ, ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ, ಕಾಣಿಯೂರು ಶ್ರೀ ಗಾನ ಮಾಧುರ್ಯ ಭಜನಾ ಮಂಡಳಿ, ಪುತ್ತೂರು ಶ್ರೀ ಶಂಭೋಶಂಕರ ಭಜನಾ ಮಂಡಳಿ, ಚಾರ್ವಕ ಶ್ರೀ ಸಾಕ್ಷಾತ್ ಶಿವ ಭಜನಾ ಮಂಡಳಿ, ನಾವೂರು ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ, ಬೆಳ್ತಂಗಡಿ ಕೊರಿಂಜ ಶ್ರೀ ಪಂಚಲಿಂಗೇಶ್ವರ ಭಜನಾ ಮಂಡಳಿ, ಪೆರುವಾಜೆ ಶ್ರೀ ಜಲದುರ್ಗಾ ಭಜನಾ ಮಂಡಳಿ, ದೊಡ್ಡಡ್ಕ ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿಗಳು ಭಾಗವಹಿಸಿದರು.

ಕುಣಿತ ಭಜನೆಯ ತಂಡಗಳು
ಕುಣಿತ ಭಜನೆಯಲ್ಲಿ ಮುಗೇರು ಶ್ರೀ ಮಹಾವಿಷ್ಣು ಮಕ್ಕಳ ಭಜನಾ ಮಂಡಳಿ, ಮಂಜುನಾಥನಗರ ಶ್ರೀ ಸಿದ್ಧಿ ವಿನಾಯಕ ಕುಣಿತ ಭಜನಾ ಮಂಡಳಿ, ಅಗಳಿ ಶ್ರೀ ಸದಾಶಿವ ಮಕ್ಕಳ ಕುಣಿತ ಭಜನಾ ಮಂಡಳಿ, ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ಮಹಿಳಾ ಕುಣಿತ ಭಜನಾ ಮಂಡಳಿ,ಶಾಂತಿಮೋಗರು ಶ್ರೀ ಸುಬ್ರಹ್ಮಣ್ಯೇಶ್ವರ ಮಕ್ಕಳ ಕುಣಿತ ಭಜನಾ ಮಂಡಳಿ, ಆಲಡ್ಕ ಮುಂಡೂರು ಶ್ರೀ ಸದಾಶಿವ ಕುಣಿತ ಭಜನಾ ಮಂಡಳಿ, , ಮುಗೇರು ಶ್ರೀ ಮಹಾಲಕ್ಷ್ಮೀ ಮಹಿಳಾ ಭಜನಾ ತಂಡಗಳು ಭಾಗವಹಿಸಿದರು. ಕುಣಿತ ಭಜನೆ ಸುಮಾರು ಒಂದುವರೆ ತಾಸುಗಳಷ್ಟು ಸಮಯ ನಡೆಯಿತು ಎಂದು ಭಜನೆಯ ಸಂಘಟಕ ರಾಜೇಶ್ ರೈ ಮುಗೇರು ತಿಳಿಸಿದ್ದಾರೆ.
