
ಪುತ್ತೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಮಾ. 28 ರಂದು ಸವಣೂರು ಪರಣೆ ತುಳಸಿಪುರಂನಲ್ಲಿ 29 ನೇ ವರ್ಷದ ಶ್ರೀ ದೇವಿಯ ಸೇವಾ ಬಯಲಾಟವಾಗಿ ಸಂಜೆ 6 ರಿಂದ ಕಾಲಮಿತಿಯ “ನವಗ್ರಹ ಮಹಾತೆ” ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಸೇವಾಕರ್ತರಾದ ಪದ್ಮಯ್ಯ ಗೌಡ ತುಳಸಿಪುರಂ-ಪರಣೆ ಮತ್ತು ಹತ್ತು ಸಮಸ್ತರು ತಿಳಿಸಿದ್ದಾರೆ.