ಪುತ್ತೂರು: ಪುತ್ತೂರಿನ ಹಿರಿಯ ಕ್ಲಬ್ ಎನಿಸಿದ ರೋಟರಿ ಕ್ಲಬ್ ಪುತ್ತೂರು ಪ್ರಸ್ತುತ ವರ್ಷ ಡೈಮಂಡ್ ಜ್ಯುಬಿಲಿ ಆಚರಿಸುತ್ತಿದೆ. ಈ ನಿಟ್ಟಿನಲ್ಲಿ ಮಾ.28 ರಂದು ರೋಟರಿ ಕ್ಲಬ್ ಪುತ್ತೂರಿಗೆ ರೋಟರಿ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಸಂದರ್ಭದಲ್ಲಿ ರೋಟರಿ ಕ್ಲಬ್ ಪುತ್ತೂರು ಕೋಶಾಧಿಕಾರಿ, ಮಾಜಿ ಅಧ್ಯಕ್ಷ ಎಂ.ಜಿ ರಫೀಕ್ ಮಾಲಕತ್ವದ ದರ್ಬೆ ಬುಶ್ರಾ ಕಾಂಪ್ಲೆಕ್ಸ್ ನಲ್ಲಿನ ನಯಾ ಚಪ್ಪಲ್ ಬಜಾರ್ ಪ್ರಾಯೋಜಕತ್ವದಲ್ಲಿ ಮಳಿಗೆಯ ಎದುರುಗಡೆ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಜಿಲ್ಲಾ ಗವರ್ನರ್ ವಿಕ್ರಂ ದತ್ತರವರು ಉದ್ಘಾಟಿಸಿದರು.
ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಗವರ್ನರ್ ವಿಕ್ರಂ ದತ್ತರವರು, ರೋಟರಿ ಪುತ್ತೂರು ಮಾಜಿ ಅಧ್ಯಕ್ಷ ಎಂ.ಜಿ ರಫೀಕ್ ರವರು ರೋಟರಿ ಸಂಸ್ಥೆ ಮುಖೇನ ಹಲವಾರು ಸಮಾಜಮುಖಿ ಕಾರ್ಯಕ್ರಮದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುತ್ತಾರೆ. ಓರ್ವ ಉದ್ಯಮಿಯು ಉದ್ಯಮದಿಂದ ಬಂದ ಲಾಭಾಂಶದ ಕಿಂಚಿತ್ ಅಂಶವನ್ನು ಸಮಾಜಕ್ಕೆ ಅರ್ಪಿಸುವಲ್ಲಿ ಎಂ.ಜಿ ರಫೀಕ್ ರವರು ಉದಾಹರಣೆಯಾಗಿದ್ದಾರೆ. ರೋಟರಿ ಪುತ್ತೂರಿಗೆ ಡೈಮಂಡ್ ಜ್ಯುಬಿಲಿ ಸಂಭ್ರವಾಗಿದ್ದು ರೋಟರಿ ಡೈಮಂಡ್ ಜ್ಯುಬಿಲಿಗೆ 60 ಅಂಗನವಾಡಿ ಮಕ್ಕಳಿಗೆ ಉಚಿತವಾಗಿ ಪಾದರಕ್ಷೆ ನೀಡಲು ಹೆಜ್ಜೆಯನ್ನಿಟ್ಟಿರುವುದು ರೋಟರಿ ಸಂಸ್ಥೆಗೆ ಮಾದರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ರೋಟರಿ ಅಸಿಸ್ಟೆಂಟ್ ಗವರ್ನರ್ ಡಾ.ಹರ್ಷಕುಮಾರ್ ರೈ, ವಲಯ ಸೇನಾನಿ ಮುರಳೀಧರ್ ರೈ, ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪತಿ ರಾವ್, ಕಾರ್ಯದರ್ಶಿ ದಾಮೋದರ್ ಕೆ.ಎ, ಸಮುದಾಯ ಸೇವಾ ವಿಭಾಗದ ನಿರ್ದೇಶಕ ರಾಜ್ ಗೋಪಾಲ್ ಬಳ್ಳಾಲ್, ನಿಯೋಜಿತ ಅಧ್ಯಕ್ಷ ಡಾ.ಶ್ರೀಪ್ರಕಾಶ್ ಬಿ. ಸಹಿತ ರೋಟರಿ ಕ್ಲಬ್ ಪುತ್ತೂರು ಸದಸ್ಯರು ಉಪಸ್ಥಿತರಿದ್ದರು. ರೋಟರಿ ಕ್ಲಬ್ ಪುತ್ತೂರು ಕೋಶಾಧಿಕಾರಿ ಹಾಗೂ ನಯಾ ಚಪ್ಪಲ್ ಬಜಾರ್ ಮಾಲಕ ಎಂ.ಜಿ ರಫೀಕ್ ಸ್ವಾಗತಿಸಿ, ಕ್ಲಬ್ ಹಿರಿಯ ಸದಸ್ಯ ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ನಯಾ ಚಪ್ಪಲ್ ಬಜಾರ್ ಸಿಬ್ಬಂದಿ ಸಹಕರಿಸಿದರು.