ಇಂಡಿಯನ್ ಟ್ಯಾಲೆಂಟ್ ಒಲಂಪಿಯಾಡ್ ಪರೀಕ್ಷೆಯಲ್ಲಿ ಬೆಟ್ಟಂಪಾಡಿಯ ಪ್ರಿಯದರ್ಶಿನಿಗೆ ಹಲವು ರ್‍ಯಾಂಕ್

0

ಬೆಟ್ಟಂಪಾಡಿ:  ಎರಡನೇ ಸುತ್ತಿನ ಇಂಡಿಯನ್ ಟ್ಯಾಲೆಂಟ್ ಒಲಿಂಪಿಯಾಡ್ ಪರೀಕ್ಷೆಯಲ್ಲಿ ಬೆಟ್ಟಂಪಾಡಿಯ ಪ್ರಿಯದರ್ಶಿನಿ ವಿದ್ಯಾಸಂಸ್ಥೆಗೆ ಹಲವು ರ್‍ಯಾಂಕ್ ಗಳು ಲಭಿಸಿವೆ.

ಚೆಲ್ಯಡ್ಕ ಸದಾನಂದ ರೈ ಹಾಗೂ ಸೌಮ್ಯ ರೈ ಚೆಲ್ಯಡ್ಕ ದಂಪತಿ ಪುತ್ರಿ ಶಾರ್ವಿ ಎಸ್ ರೈ (1 ನೇ ತರಗತಿ) ಇಂಗ್ಲಿಷ್ ವಿಷಯದಲ್ಲಿ ರಾಜ್ಯಕ್ಕೆ ನಾಲ್ಕನೇ ರ್‍ಯಾಂಕ್,  ದರ್ಬೆ ಆದಿತ್ಯ ಘಾಟೆ ಹಾಗೂ ಪ್ರಸನ್ನ ಕುಮಾರಿ  ದಂಪತಿ ಪುತ್ರಿ ಆದ್ಯ ಘಾಟೆ (ಎರಡನೇ ತರಗತಿ)  ಇಂಗ್ಲಿಷ್ ವಿಷಯದಲ್ಲಿ 5ನೇ  ರ್‍ಯಾಂಕ್ ಗಳಿಸಿ ವಿದ್ಯಾರ್ಥಿ ವೇತನಕ್ಕೆ ಅರ್ಹರಾಗಿರುತ್ತಾರೆ.  ಆರ್ಲಪದವು ಸುಭಾಷ್ ರೈ ಹಾಗೂ ಶರ್ಮಿಳಾ ದಂಪತಿ ಪುತ್ರಿ ಸಾಯಿ ಶ್ರೀಯಾಲಿ (ಮೂರನೇ ತರಗತಿ)  ವಿಜ್ಞಾನ ವಿಷಯದಲ್ಲಿ 20 ನೇ ರ್‍ಯಾಂಕ್ ಹಾಗೂ ಕಾನುಮೂಲೆ ವೆಂಕಟರಮಣ ಭಟ್ ಹಾಗೂ ಶ್ರೀದೇವಿ  ದಂಪತಿ ಪುತ್ರ ಈಶಾನ ಬಿ. (ಮೂರನೇ ತರಗತಿ) ಗಣಿತ ವಿಷಯದಲ್ಲಿ 23 ನೇ ರ್‍ಯಾಂಕ್,  ಪ್ರಕಾಶ್ ರೈ ಎಸ್. ಹಾಗೂ ಅಶ್ವಿತಾ ಎಸ್. ರೈ ದಂಪತಿ ಪುತ್ರಿ ಆಪ್ತಿ ಎಸ್. ರೈ (5ನೇ ತರಗತಿ) ಗಣಿತ ವಿಷಯದಲ್ಲಿ 20 ನೇ ರ್‍ಯಾಂಕ್ ಹಾಗೂ ಶಿವಗಿರಿಬೀಡು ವಿನೋದ್ ಬಲ್ಲಾಳ್ ಮತ್ತು ದಿವ್ಯ ಬಿ. ದಂಪತಿ ಪುತ್ರಿ ಪ್ರಣತಿ ಬಿ.‌ (ಐದನೇ ತರಗತಿ) ವಿಜ್ಞಾನ ವಿಷಯದಲ್ಲಿ 23 ನೇ ರ್‍ಯಾಂಕ್ ಹಾಗೂ ನವೀನ್ ರೈ ಬದಿಯಾರು ಮತ್ತು ಶುಭಪ್ರಿಯ ದಂಪತಿ ಪುತ್ರ ಭುವನ್ ರೈ (ಎಂಟನೇ ತರಗತಿ) ವಿಜ್ಞಾನ ವಿಷಯದಲ್ಲಿ 22 ನೇ ರ್‍ಯಾಂಕ್ ಗಳಿಸಿ ಎಕ್ಸಲೆನ್ಸ್ ಅವಾರ್ಡ್ ಹಾಗೂ ಮೆಡಲ್ ಪಡೆದುಕೊಂಡಿರುತ್ತಾರೆ. ಇವರನ್ನು ಶಾಲಾ ಸಹಶಿಕ್ಷಕಿ ಸಂಧ್ಯಾ ಎ. ತರಬೇತುಗೊಳಿಸಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಗೆ ಮುಖ್ಯಗುರು ರಾಜೇಶ್ ಎನ್. ಹಾಗೂ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here