ನಾಳೆ(ಎ.13) ಕಟೀಲು ಕ್ಷೇತ್ರದಲ್ಲಿ ಸ್ವರ ಮಾಧುರ್ಯದಿಂದ ಸಂಗೀತ ಕಾರ್ಯಕ್ರಮ

0

ಪುತ್ತೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ಜಾತ್ರೋತ್ಸವದ ಅಂಗವಾಗಿ ಸ್ವರ ಮಾಧುರ್ಯ ಸಂಗೀತ ಬಳಗ ಪುತ್ತೂರು ಇದರ ಸೋನಿಕಾ ಜನಾರ್ದನ್ ಮತ್ತು ತಂಡದವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಎ.13 ರಂದು ಕಟೀಲು ಶ್ರೀ ಕ್ಷೇತ್ರದಲ್ಲಿ ನಡೆಯಲಿದೆ.

ಅನಂತ ಪದ್ಮನಾಭ ಆಸ್ರಣ್ಣ ಕಟೀಲು ಇವರ ಶುಭಾ ಆಶಿರ್ವಾದದೊಂದಿಗೆ ಅಪರಾಹ್ನ 3 ರಿಂದ 5 ರ ತನಕ ಸರಸ್ವತಿ ಸದನದಲ್ಲಿ ಕಾರ್ಯಕ್ರಮ ನಡೆಯಲಿದೆ. ಕಿಶೋರ್ ಪೆರ್ಲ ಗಾಯನ, ಬಾಬಣ್ಣ ಪುತ್ತೂರು ಕೀಬೋರ್ಡ್, ಸ್ವರಾಜ್ ಉಪ್ಪಳ ತಬಲ, ಕಾರ್ತಿಕ್ ಸುಬ್ರಹ್ಮಣ್ಯ ರಿದಂ ಪ್ಯಾಡ್‌ನಲ್ಲಿ ಸಹಕರಿಸಲಿದ್ದಾರೆ.

ಕಾರ್ಯಕ್ರಮದ ಪ್ರಾಯೋಜಕರಾಗಿ ಶರತ್. ಡಿ. ಶೆಟ್ಟಿ ವಕೀಲರು ಮೂಡಬಿದ್ರೆ, ಹರೀಶ್ ಕುಮಾರ್ ಬಳಕ್ಕ ಮತ್ತು ದೀಪಕ್ ಬೊಳ್ವಾರು ವಕೀಲರು ಪುತ್ತೂರು, ಯಂ ಆರ್ ಬಲ್ಲಾಳ್ ವಕೀಲರು ಮಂಗಳೂರು, ಅಕ್ಷಿತ ಶೆಟ್ಟಿ ಮತ್ತು ಕಿರಣ್ ಕುಮಾರ್ ಶೆಟ್ಟಿ ಗೋಳಿದಡಿ ಗುತ್ತುಪಡುಪೆರಾರು ಸಹಕರಿಸಲಿದ್ದಾರೆ ಎಂದು ಸ್ವರಮಾಧುರ್ಯದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here