ಕೊಂಬೆಟ್ಟು ಕಾಲೇಜಿನ ಶ್ರಾವ್ಯ.ಎಚ್.ಬಿ ಇವರಿಗೆ ಕಾಮರ್ಸ್ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ 9ನೇ ರ್‍ಯಾಂಕ್

0

ಪುತ್ತೂರು: ಪುತ್ತೂರು ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಶ್ರಾವ್ಯ.ಎಚ್.ಬಿ. ಇವರು 2025ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಕಾಮರ್ಸ್ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ 9ನೇ ರ್‍ಯಾಂಕ್ ಪಡೆದಿರುತ್ತಾರೆ.

ಶತಮಾನ ಕಂಡ ಪದವಿ ಪೂರ್ವ ಕಾಲೇಜಿನ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಏರಿಸಿರುತ್ತಾರೆ.ಇವರು IT 100, ಇಂಗ್ಲಿಷ್ 95, ಲೆಕ್ಕಶಾಸ್ತ್ರ 97, ಅರ್ಥಶಾಸ್ತ್ರ 100, ವ್ಯವಹಾರ ಅಧ್ಯಯನ 99, ಸಂಖ್ಯಾಶಾಸ್ತ್ರ 100 ಅಂಕಗಳನ್ನು ಪಡೆದಿರುತ್ತಾರೆ. ಒಟ್ಟು 600 ಅಂಕಗಳಲ್ಲಿ 591 ಅಂಕಗಳನ್ನು ಪಡೆದಿರುತ್ತಾರೆ. ಇವರು ಬನ್ನೂರು ನಿವಾಸಿ ಹರಿಶ್ಚಂದ್ರ ಆಚಾರ್ಯ ಮತ್ತು ಶಾಂತಿ ದಂಪತಿಗಳ ಪುತ್ರಿ.

LEAVE A REPLY

Please enter your comment!
Please enter your name here