ಕಡಬ: 2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಡಬ ಸೈಂಟ್ ಜೋಕಿಮ್ಸ್ ಪದವಿಪೂರ್ವ ಕಾಲೇಜು ಶೇ.94 ಫಲಿತಾಂಶ ಪಡೆದುಕೊಂಡಿದೆ.
ಪರೀಕ್ಷೆ ಬರೆದ 111 ವಿದ್ಯಾರ್ಥಿಗಳ ಪೈಕಿ 104 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಒಟ್ಟು 15 ವಿದ್ಯಾರ್ಥಿನಿಯರು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ ಹೊಂದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಸಿಲ್ವಿಯಾ ಟಿ.ಎಸ್(563), ಲೋಕೇಶ್(558), ರಕ್ಷಿತ್(552), ಶಾಕಿಬ(524), ಫಾತಿಮತ್ ಆಸುರ(522), ಪ್ರನೀತ್(517), ಆಯಿಶತ್ ಜಝೀರ(510) ಹಾಗೂ ಹನಾ ಫಾತಿಮ(506) ಅಂಕಗಳನ್ನು ಗಳಿಸಿ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಗೊಂಡಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಶಬರೀಶ(567), ಪಿ.ಎಚ್ ಮಶ್ರೂರ್ ಅಹ್ಸನ್(561), ಜ್ಞಾನೇಶ್(559), ಅಬ್ದುನ್ನಾಸಿರ್(531), ಫಾತಿಮತ್ ಹಸ್ನಿಯಾ(528), ಶರೋನ್(517), ಸುಕೇಶ್(511) ಅಂಕಗಳನ್ನು ಗಳಿಸಿ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಗೊಂಡಿದ್ದಾರೆ. ಫಾತಿಮತ್ ತಸ್ಲಿಯಾ(505) ಮನ್ವಿತ್(504) ಹಾಗೂ ಸಿಂಚನ ಶೆಟ್ಟಿ(501) ಅಂಕಗಳನ್ನು ಗಳಿಸಿ ಉತ್ತೀರ್ಣರಾಗಿದ್ದಾರೆ.