ಇದು ಮುಕ್ತಾಯ ಅಲ್ಲ ಆರಂಭ. ಜನಿವಾರ ಕೇವಲ ನೂಲು ಅಲ್ಲ ಅದು ನಮ್ಮ ಅಸ್ಮಿತೆ- ನ್ಯಾಯವಾದಿ ಮಹೇಶ್ ಕಜೆ
ಪುತ್ತೂರು :ವಿದ್ಯಾರ್ಥಿಗಳಿಂದ ಜನಿವಾರ ತೆಗೆಯುವಂತೆ ಹೇಳಿ ಸಿಇಟಿ ಪರೀಕ್ಷೆಗೆ ನಿರಾಕರಿಸಿರುವುದಕ್ಕೆ ಬ್ರಾಹ್ಮಣ ಸಮಾಜದಲ್ಲಿ ಆಕ್ರೋಶ ಭುಗಿಲೆದ್ದಿದೆ.
ಪುತ್ತೂರಿನಲ್ಲಿ ವಿವಿಧ ಬ್ರಾಹ್ಮಣ ಸಂಘಗಳ ಸದಸ್ಯರು ಅಖಿಲ ಕರ್ನಾಟಕ ಭಾರತ ಮಹಾಸಭಾದ ನೇತೃತ್ವದಲ್ಲಿ ಪುತ್ತೂರಿನಲ್ಲಿ ಎ.21 ರಂದು ತಾಲೂಕು ಆಡಳಿತ ಸೌಧದ ಬಳಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯ ಕೊನೆಯಲ್ಲಿ ಸಹಾಯ ಕಮೀಷನರ್ ಗೆ ಮನವಿ ನೀಡಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಪ್ರತಿನಿಧಿ ನ್ಯಾಯವಾದಿ ಮಹೇಶ್ ಕಜೆ ಅವರು ಮಾತನಾಡಿ, ಇವತ್ತು ಸರಕಾರ ನಮ್ಮನ್ನು ಒಟ್ಟುಗೂಡಿಸಲು ಮಾಡಿರುವ ವ್ಯವಸ್ಥೆಯಾಗಿದೆ. ನಮಗೆ ಪ್ರಶ್ನೆ ರಾಜಕೀಯವಲ್ಲ. ಕೆಲವರು ಇದು ಮುಗಿದ ಪ್ರಕರಣ ಇನ್ನು ಯಾಕೆ ಪ್ರತಿಭಟನೆ ಎಂದು ಪ್ರಶ್ನೆ ಮಾಡಿದವರಿದ್ದಾರೆ. ಅವರಿಗೆ ನಾನು ಹೇಳುವುದು ಇದು ಮುಕ್ತಾಯ ಅಲ್ಲ ಆರಂಭ. ಜನಿವಾರ ಕೇವಲ ನೂಲು ಅಲ್ಲ. ಅದು ನಮ್ಮ ಅಸ್ಮಿತೆ. ಅದಕ್ಕೆ ಕೈ ಹಾಕಿದರೆ ತಾಯಿ ಗಾಯತ್ರಿಯ ಸೆರಗಿಗೆ ಕೈ ಹಾಕಿದಂತೆ. ಹಾಗಾಗಿ ನಾವು ಕೊನೆಯ ಉಸಿರು ಇರುವ ತನಕ ಬಿಡುವುದಿಲ್ಲ. ಭಾರತದಲ್ಲಿ ಸನಾತನ ಧರ್ಮ ಉಳಿಯಲು ಬ್ರಾಹ್ಮಣ್ಯ ಉಳಿಯಬೇಕು ಎಂದು ಹೇಳಿದರು.


ಡಾ.ಸುರೇಶ್ ಪುತ್ತೂರಾಯ, ಅರುಣ್ ಕುಮಾರ್ ಪುತ್ತಿಲ, ವಿಶ್ವೇಶ್ವರ ಭಟ್ ಬಂಗಾರಡ್ಕ, ಜಿ.ಎಲ್ ಬಲರಾಮ ಆಚಾರ್ಯ, ಎನ್ ಕೆ ಜಗನ್ನಿವಾಸ ರಾವ್, ಡಾ.ಕೃಷ್ಣ ಪ್ರಸನ್ನ, ವಿದ್ಯಾಗೌರಿ, ಕೇಶವಪ್ರಸಾದ್ ಮುಳಿಯ, ಗೋಪಾಲಕೃಷ್ಣ ಹೇರಳೆ ಸಹಿತ ಹಲವಾರು ಮಂದಿ ಮಾತನಾಡಿದರು. ಬಿಂದು ಕಂಪೆನಿಯ ಸತ್ಯಶಂಕರ, ಶಿವಶಂಕರ್ ಬೋನಂತಾಯ, ಜನಿವಾರ ಧರಿಸಿದ ವಿಶ್ವಕರ್ಮ ಸಮುದಾಯದವರು , ಮಾಜಿ ಶಾಸಕ ಸಂಜೀವ ಮಠಂದೂರು ಮತ್ತಿತರರು ಉಪಸ್ಥಿತರಿದ್ದರು.

