ಕುಂಬ್ರ ಶ್ರೀ ಲಕ್ಷ್ಮೀ ಜ್ಯುವೆಲ್ಲರಿ ವರ್ಕ್ಸ್‌ನ ಸಿ ಸ್ಕೀಂ ಆರಂಭ- ಸದಸ್ಯರಾಗಲು ಅವಕಾಶ

0

ಪುತ್ತೂರು: ಕಳೆದ 21 ವರ್ಷಗಳಿಂದ ಕುಂಬ್ರದ ನಿಶ್ಮಿತಾ ಕಾಂಪ್ಲೆಕ್ಸ್‌ನಲ್ಲಿ ವ್ಯವಹರಿಸುತ್ತಿರುವ ಶ್ರೀ ಲಕ್ಷ್ಮೀ ಜ್ಯುವೆಲ್ಲರಿ ವರ್ಕ್ಸ್‌ನ ಚಿನ್ನದ ಸ್ಕೀಂನ ಬಿ ಸರಣಿ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು ಸಿ ಸರಣಿ ಶೀಘ್ರದಲ್ಲೇ ಆರಂಭಗೊಳ್ಳಲಿದೆ. ಒಟ್ಟು 20 ಕಂತುಗಳು ಪ್ರತಿ ತಿಂಗಳಿಗೆ ರೂ.500 ರಂತೆ ಪಾವತಿಸಿ ಒಟ್ಟು 10 ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ. ಪ್ರತಿ ತಿಂಗಳು 10 ನೇ ತಾರೀಖಿಗೆ ಗ್ರಾಹಕರ ಸಮ್ಮುಖದಲ್ಲಿ ಡ್ರಾ ನಡೆಸಿ ಅದೃಷ್ಟವಂತರನ್ನು ಆಯ್ಕೆ ಮಾಡಲಾಗುತ್ತಿದ್ದು ಡ್ರಾ ವಿಜೇತರು ಮುಂದಿನ ಕಂತು ಕಟ್ಟಬೇಕಾಗಿಲ್ಲ. ಸಿ ಸರಣಿಗೆ ಸದಸ್ಯರಾಗಲು ಕೆಲವೇ ಮಂದಿಗೆ ಅವಕಾಶವಿದ್ದು ಸದಸ್ಯರಾಗುವವರು 9980199907 ಗೆ ಸಂಪರ್ಕಿಸಬಹುದಾಗಿದೆ ಎಂದು ಜ್ಯುವೆಲ್ಲರಿ ಮಾಲಕ ಉದಯ ಆಚಾರ್ಯ ಕೃಷ್ಣನಗರರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here