ಅಧ್ಯಕ್ಷರಾಗಿ ಅಬ್ದುಲ್ ಖಾದರ್ ಹಾಜಿ ಸುರಯ್ಯ ಕೂರ್ನಡ್ಕ ಪ್ರಧಾನ ಕಾರ್ಯದರ್ಶಿಯಾಗಿ ಡಾ.ಹಾಜಿ ಎಸ್ ಅಬೂಬಕರ್ ಆರ್ಲಪದವು ಕೋಶಾಧಿಕಾರಿಯಾಗಿ ಎಲ್ ಟಿ ಅಬ್ದುಲ್ ರಜಾಕ್ ಹಾಜಿ ಪುತ್ತೂರು
ಪುತ್ತೂರು: ತಾಲೂಕು ಸೀರತ್ ಕಮಿಟಿಯ ಮಹಾಸಭೆಯು ಮೇ.7ರಂದು ಸೀರತ್ ಕಮಿಟಿ ಕಚೇರಿಯಲ್ಲಿ ಸಮಿತಿ ಅಧ್ಯಕ್ಷರಾದ ಅಬ್ದುಲ್ ಖಾದರ್ ಹಾಜಿ ಸುರಯ್ಯ ಕೂರ್ನಡ್ಕ ಇವರ ಅಧ್ಯಕ್ಷತೆಯಲ್ಲಿ ಜರಗಿತು.
ಮಹಾಸಭೆಯಲ್ಲಿ ನೂತನ ಸಮಿತಿಯನ್ನು ಈ ಕೆಳಗಿನಂತೆ ರಚಿಸಲಾಯಿತು. ಅಧ್ಯಕ್ಷರಾಗಿ ಅಬ್ದುಲ್ ಖಾದರ್ ಹಾಜಿ ಸುರಯ್ಯ ಕೂರ್ನಡ್ಕ ಪ್ರಧಾನ ಕಾರ್ಯದರ್ಶಿಯಾಗಿ ಡಾ. ಹಾಜಿ ಎಸ್ ಅಬೂಬಕರ್ ಅರ್ಲಪದವು ಕೋಶಾಧಿಕಾರಿಯಾಗಿ ಎಲ್ ಟಿ ಅಬ್ದುಲ್ ರಜಾಕ್ ಹಾಜಿ ಪುತ್ತೂರು ಉಪಾಧ್ಯಕ್ಷರುಗಳಾಗಿ ಅಬ್ದುಲ್ ರಹಮಾನ್ ಹಾಜಿ ಆಜಾದ್, ಶಕೂರ್ ಹಾಜಿ ಕಲ್ಲೇಗ ಕೆ ಎಮ್, ಬಾವಾ ಹಾಜಿ ಕೂರ್ನಡ್ಕ ಮತ್ತು ಯೂಸುಫ್ ಹಾಜಿ ವಳಾಲ್ ಉಪ್ಪಿನಂಗಡಿ ಕಾರ್ಯದರ್ಶಿಗಳಾಗಿ ಹಾಜಿ ಮಹಮ್ಮದ್ ಸಾಬ್ ಕೂರ್ನಡ್ಕ, ನೋಟರಿ ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ, ಖಾದರ್ ಕಂಝ್ ಕಬಕ ಸಂಘಟನಾ ಕಾರ್ಯದರ್ಶಿಯಾಗಿ ಸಾಲ್ಮರ ಶರೀಫ್, ಪತ್ರಿಕಾ ಕಾರ್ಯದರ್ಶಿಯಾಗಿ ಶೇಖ್ ಜೈನುದ್ದೀನ್ ಪುತ್ತೂರು ಹಾಗೂ 30 ಮಂದಿ ಸದಸ್ಯರನ್ನು ಕಾರ್ಯಕಾರಿ ಸಮಿತಿಗೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಚುನಾವಣಾ ಅಧಿಕಾರಿ ನೋಟರಿ ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಕಾರ್ಯದರ್ಶಿ ನೋಟರಿ ನ್ಯಾಯವಾದಿ ನೂರುದ್ದೀನ್ ಸಾಲ್ಮರ ಸ್ವಾಗತಿಸಿದರು. ಕಾರ್ಯದರ್ಶಿ ಡಾ. ಹಾಜಿ.ಎಸ್ ಅಬೂಬಕರ್ ಆರ್ಲಪದವು ವರದಿ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ಶಕೂರ್ ಹಾಜಿ ಕಲ್ಲೆಗ ಲೆಕ್ಕಪತ್ರ ಮಂಡನೆ ಮಾಡಿದರು.