ಸಂಟ್ಯಾರ್:‌ ಕಲ್ಲರ್ಪೆ ಬಳಿ ಸರಣಿ ಅಪಘಾತ

0

ಸಂಟ್ಯಾರ್: ಕಲ್ಲರ್ಪೆಯ ಕಾರ್ಪಾಡಿ ದ್ವಾರದ ಬಳಿ ಸರಣಿ ಅಪಘಾತ ನಡೆದಿದ್ದು, ಬೈಕ್‌ ಸವಾರರು ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾದ ಘಟನೆ ಭಾನುವಾರ ನಡೆದಿದೆ.‌


ಕಟೀಲಿನಲ್ಲಿ ಮದುವೆ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಇದರೊಂದಿಗೆ ಎರಡು ಕಾರು, ಹಾಗೂ ಬೈಕ್ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಬೈಕ್ ಸವಾರರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ನಾಯಿ ಅಡ್ಡ ಬಂದ ಪರಿಣಾಮ ಹಠಾತ್ ಬ್ರೇಕ್ ಹಾಕಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

LEAVE A REPLY

Please enter your comment!
Please enter your name here