ಸಂಟ್ಯಾರ್: ಕಲ್ಲರ್ಪೆಯ ಕಾರ್ಪಾಡಿ ದ್ವಾರದ ಬಳಿ ಸರಣಿ ಅಪಘಾತ ನಡೆದಿದ್ದು ಬೈಕ್ ಸವಾರರು ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾದ ಘಟನೆ ಭಾನುವಾರ ನಡೆದಿದೆ.
ಕಟೀಲಿನಲ್ಲಿ ಮದುವೆ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಕಾರು ಅಪಘಾತಕ್ಕೀಡಾದೆ. ಇದರೊಂದಿಗೆ ಒಂದರ ಮೇಲೊಂದರಂತೆ ಇನ್ನೆರಡು ಕಾರು ಹಾಗೂ ಬೈಕ್ ಗುದ್ದಿದ್ದು, ಬೈಕ್ ಸವಾರರು ಅಲ್ಪ ಸ್ವಲ್ಪ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಯಿಯೊಂದು ಅಡ್ಡ ಬಂದ ಪರಿಣಾಮ ಹಠಾತ್ ಬ್ರೇಕ್ ಹಾಕಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.