ಬಡಗನ್ನೂರು: ಸುಳ್ಯಪದವು ಶಬರಿನಗರ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ಸಂಕ್ರಮಣದ ಅಂಗವಾಗಿ ಸ್ವಾಮಿ ಕೊರಗಜ್ಜನಿಗೆ ಅಗೇಲು ಸೇವೆ ಹಾಗೂ ಶ್ರೀ ಗುಳಿಗರಾಜನಿಗೆ ಕಲಶಸೇವೆ ನಡೆದು ಪ್ರಸಾದ ವಿತರಣೆ ನಡೆಯಿತು. ಊರ ಹಾಗೂ ಪರವೂರ ಭಕ್ತಾದಿಗಳಿಂದ ವಿವಿಧ ಹರಕೆ ರೂಪದಲ್ಲಿ ಸುಮಾರು 129 ಅಗೇಲು ಸೇವೆ ಮತ್ತು ಕಲಶ ಸೇವೆ ನೆರವೇರಿತು. ಬಳಿಕ ಅನ್ನಪ್ರಸಾದ ವಿತರಣೆ ಮಾಡಲಾಯಿತು. ಸುಮಾರು 500ಕ್ಕೂ ಮಿಕ್ಕಿ ಭಕ್ತಾದಿಗಳು ಪ್ರಸಾದ ಭೋಜನ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಕೊರಗಜ್ಜ ಸೇವ ಸಮಿತಿ ಅಧ್ಯಕ್ಷ ಬೆಳಿಯಪ್ಪ ಗೌಡ ಶಬರಿನಗರ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಮರದಮೂಲೆ, ಉಪಾಧ್ಯಕ್ಷ ಸದಾನಂದ ರೖೆ ಬೊಳಕೂಡ್ಲು, ಜತೆ ಕಾರ್ಯದರ್ಶಿ ವಿನಯಕುಮಾರ್ ದೇವಸ್ಯ, ಕೋಶಾಧಿಕಾರಿ ಭಾಸ್ಕರ ಹೆಗಡೆ, ಪೂಜಾಕರ್ಮಿ ಮಾಧವ ಸಾಲಿಯಾನ್ ಹಾಗೂ ಸಮಿತಿ ಸದಸ್ಯರು ಮತ್ತು ಊರ-ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.
