ಪುತ್ತೂರು: ಮುಂಬೈಯ ಪುಣೆಯಲ್ಲಿ ಹೋಟೆಲ್ ಉದ್ಯಮಿಯಾಗಿರುವ ಕೆಯ್ಯೂರು ಗ್ರಾಮದ ಕೋಡಂಬು ಶಿವರಾಮ ರೈಯವರು ಪಲ್ಲತ್ತಡ್ಕ ಶ್ರೀ ಹೊಸಮ್ಮ ದೈವಸ್ಥಾನಕ್ಕೆ ಅನ್ನದಾನದ ದೇಣಿಗೆ ರೂ.2 ಲಕ್ಷವನ್ನು ಅರ್ಪಣೆ ಮಾಡಿದರು. ಪಲ್ಲತ್ತಡ್ಕ ಶ್ರೀ ಹೊಸಮ್ಮ ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಎಸ್.ಬಿ.ಜಯರಾಮ ರೈ ಬಳಜ್ಜರವರು ದೇಣಿಗೆ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಪತ್ನಿ ಸೌಮ್ಯ ಶಿವರಾಮ ರೈ, ಅತ್ತೆ ರೇವತಿ ಕಮಲಾಕ್ಷ ರೈ, ಮಕ್ಕಳಾದ ಸ್ತುತಿ ಶಿವರಾಮ ರೈ, ಶ್ರೀತನ್ ಶಿವರಾಮ ರೈ ಉಪಸ್ಥಿತರಿದ್ದರು. ಕಳೆದ ಎಪ್ರಿಲ್ ತಿಂಗಳಲ್ಲಿ ನಡೆದ ಶ್ರೀ ದೈವದ ನೇಮೋತ್ಸವದ ಸಂದರ್ಭದಲ್ಲಿ ಶಿವರಾಮ ರೈ ಕೋಡಂಬುರವರಿಂದ ಅನ್ನದಾನ ಸೇವೆ ನಡೆದಿತ್ತು.
