ಪುತ್ತೂರು: 28 ವರ್ಷಗಳಲ್ಲಿ ಇಂಜಿನಿಯರಿಂಗ್ ವರ್ಕ್ಸ್ ಮತ್ತು ಸ್ಟೀಲ್ಸ್ ಹಾಗೂ ಹಾರ್ಡ್ವೇರ್ ಮಾರಾಟ ಕ್ಷೇತ್ರದಲ್ಲಿ ಬೆಳೆದು ಬಂದಿರುವ ಉದ್ಯಮಿ ಸುಧೀರ್ ಶೆಟ್ಟಿ ತೆಂಕಿಲ ಅವರ ಮಾಲೀಕತ್ವದ ಬಹು ಮಹಡಿ ವಾಣಿಜ್ಯ ಸಂಕೀರ್ಣ ‘ವಿಘ್ನೇಶ್ವರ ಕಾಂಪ್ಲೆಕ್ಸ್’ ಮೇ.22ರಂದು ಸಂಜೆ ಉದ್ಘಾಟನೆಗೊಳ್ಳಲಿರುವ ಹಿನ್ನಲೆಯಲ್ಲಿ ಮೇ.22ರಂದು ಬೆಳಿಗ್ಗೆ ಧಾರ್ಮಿಕ ಕಾರ್ಯಕ್ರಮ ನಡೆಯಿತು.
ಧಾರ್ಮಿಕ ಕೈಕಂರ್ಯವನ್ನು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಅರ್ಚಕ ಜಯರಾಮ್ ಭಟ್ ಹಾಗೂ ಉದಯ ಭಟ್ ತಂಡ ನೆರವೇರಿಸಿದರು. ಆ ಬಳಿಕ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಅರ್ಚಕ ಅಕ್ಷಯ ಉಡುಪ ಮತ್ತು ರಮೇಶ್ ಭಟ್ ಪುತ್ತೂರು ಬಳಗದಿಂದ ಚೌಕಿ ಪೂಜಾ ಕಾರ್ಯಕ್ರಮ ನೆರವೇರಿತು.
ಈ ವೇಳೆ ಸಂಕೀರ್ಣ ಮಾಲೀಕ ಸುಧೀರ್ ಶೆಟ್ಟಿ ಯವರ ತಂದೆ ದಯಾನಂದ ಶೆಟ್ಟಿ ತೆಂಕಿಲ , ಉದ್ಯಮಿ ವಿಕ್ರಂ ಶೆಟ್ಟಿ ಅಂತರ ಕೋಡಿಬಾಂಡಿ ಮತ್ತು ಪುತ್ರ ಸಾಮ್ರಾಟ್ ಶೆಟ್ಟಿ , ನಹುಷ ಭಟ್ ಪಳನೀರು , ಉದ್ಯಮಿ ಪ್ರಸನ್ನ ಶೆಟ್ಟಿ ಸಾಮೆತ್ತಡ್ಕ , ಸುಧೀರ್ ಶೆಟ್ಟಿ ಪಂಜಳ , ಶಶಂಕಾ ಕೊಟೇಚಾ , ಉದ್ಯಮಿ ಪದ್ಮನಾಭ ಶೆಟ್ಟಿ , ಪ್ರಶಾಂತ್ ಎಂಟರ್ ಪ್ರೈಸಸ್ ನ ಪ್ರಶಾಂತ್ ಶೆಣೈ , ರಮೇಶ್ ನಾಯಕ್ , ಚಂದ್ರಶೇಖರ ಕಲ್ಲಗುಡ್ಡೆ , ಮುನ್ನಾ ಇಲೆಕ್ಟ್ರಿಕಲ್ಸ್ ನ ಕೃಷ್ಣ ಪ್ರಶಾಂತ್ , ನಿವೃತ್ತ ಅಬಕಾರಿ ಸಬ್ ಇನ್ಸ್ಪೆಕ್ಟರ್ ಅಂಗಾರ , ನಗರಸಭಾ ಮಾಜಿ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ , ಪುರಸಭಾ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು , ಪ್ರಸಾದ್ ಇಂಡಸ್ಟ್ರಿ ಮಾಲೀಕ ಶಿವ ಪ್ರಸಾದ್ ಶೆಟ್ಟಿ , ಉಮೇಶ್ ರೈ ನಗರ , ಉದ್ಯಮಿ ಹರಿಪ್ರಸಾದ್ ಕರ್ಮಲ , ರಾಮಕೃಷ್ಣ ಅಶೀರ್ವಾದ ಶಾಮಿಯಾನ , ಮಹಾಲಿಂಗೇಶ್ವರ ಇಂಜಿನಿಯರಿಂಗ್ ವರ್ಕ್ಸ್ ನ ದಯಾನಂದ ಗೌಡ , ಉದ್ಯಮಿ ಉದಯ ಕಮಾರ್ ಹೆಚ್ , ಕೃಷ್ಣ ಸೌಧ ಸಂಕೀರ್ಣ ಮಾಲೀಕ ಮನೋಹರ್ , ರತನ್ ಪಡೀಲ್ , ಶ್ರೀ ದೇವಿ ಗ್ಲಾಸ್ ಆ್ಯಂಡ್ ಪ್ಲೈವುಡ್ ನ ಹರೀಶ್ , ವಿಘ್ನೇಶ್ವರ ಸ್ಟೀಲ್ ಆ್ಯಂಡ್ ಹಾರ್ಡ್ವೇರ್ ನ ರೋನಲ್ಡ್ ಮಸ್ಕರೇನ್ಹಸ್ , ದೀಕ್ಷಾ ನೈತಾಡಿ , ಪ್ರಶಾಂತ್ ಪಡೀಲ್ ಹಾಗೂ ರಾಹುಲ್ ಕೇಪುಳು , ಮಾಲೀಕರ ಸಹೋದರಿ ಮಮತಾ ಶೆಟ್ಟಿ ಹಾಗೂ ವಿಶ್ವನಾಥ ಶೆಟ್ಟಿ ಕರ್ಕುಂಜ ದಂಪತಿ ಮತ್ತು ಮಕ್ಕಳಾದ ಉದ್ಯಮಿ ವಿನೀತ್ ಶೆಟ್ಟಿ ಹಾಗೂ ವಿಶಾಂತ್ ಶೆಟ್ಟಿ ಸೊಸೆಯಂದಿರಾದ ಅಕ್ಷಿತಾ ಶೆಟ್ಟಿ ಹಾಗೂ ಆದಿತಿ ಶೆಟ್ಟಿ , ಮೊಮ್ಮಕಳಾದ ವಿಯಾನ್ , ವಿರಾಧ್ಯ ಮತ್ತು ವಿಶಿಕ , ಶೋಭಾ ದಿನೇಶ್ ಶೆಟ್ಟಿ ತೆಂಕಿಲ ಮತ್ತು ಮಕ್ಕಳಾದ ವಿಕಾಶ್ ಹಾಗೂ ವೀಕ್ಷಾ , ವಿಶ್ವನಾಥ ಶೆಟ್ಟಿ ಕಂಗ್ವೆ ಸಹಿತ ಹಲವರು ಹಾಜರಿದ್ದರು.
ಶಮಿತಾ ಸುಧೀರ್ ಶೆಟ್ಟಿ ದಂಪತಿ ತೆಂಕಿಲ ಹಾಗೂ ಮಕ್ಕಳಾದ ವಿಜ್ಙಾತ್ ಶೆಟ್ಟಿ ಮತ್ತು ವಿಶೃತಿ ಶೆಟ್ಟಿ ಸ್ವಾಗತಿಸಿ , ವಂದಿಸಿದರು.

ಪಡೀಲ್ ನಲ್ಲಿ 1997 ರಲ್ಲಿ “ವಿಘ್ನೇಶ್ವರ ಇಂಜಿನಿಯರಿಂಗ್ ವರ್ಕ್ಸ್” ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಪಡೀಲ್ ನ ಬಾಡಿಗೆ ಕಟ್ಟಡವೊಂದರಲ್ಲಿ ತನ್ನ ಕನಸಿನ ಉದ್ಯಮಕ್ಕೆ ಮುನ್ನುಡಿ ಬರೆದ ಸುಧೀರ್ ಶೆಟ್ಟಿಯವರ ಉದ್ಯಮವು 2018 ರಲ್ಲಿ ಪಡೀಲ್ ನ ತನ್ನ ಸ್ವಂತ ಕಟ್ಟಡದಲ್ಲಿ “ವಿಘ್ನೇಶ್ವರ ಸ್ಟೀಲ್ಸ್ ಆ್ಯಂಡ್ ಹಾರ್ಡ್ವೇರ್” ಎಂಬ ಹೆಸರಿನಲ್ಲಿ ಮಾರಾಟ ಮತ್ತು ಸೇವೆಯನ್ನು ಒದಗಿಸುವ ಹೊಸ ಸಂಸ್ಥೆಯಾಗಿ ಮಾರ್ಪಾಡುಗೊಂಡಿತು. ಇದೀಗ ಅವರ ಉದ್ಯಮ ಕ್ಷೇತ್ರಕ್ಕೆ ಮತ್ತೊಂದು ಸೇರ್ಪಡೆಯಾಗಿ, ನೂತನ ವಾಣಿಜ್ಯ ಸಂಕೀರ್ಣ ಪುತ್ತೂರಿನ ವಾಣಿಜ್ಯ ಕ್ಷೇತ್ರದ ಬೆಳವಣಿಗೆಗೆ ಕೊಡುಗೆ ನೀಡಲು ಸಿದ್ಧವಾಗಿದೆ.
ಕಾಂಪ್ಲೆಕ್ಸ್ ನ ವಿಶೇಷತೆಗಳು..
ಈ ವಾಣಿಜ್ಯ ಸಂಕೀರ್ಣ ಒಟ್ಟು 10 ಸಾವಿರ ಚದರ ಅಡಿ ವಿಸ್ತೀರ್ಣ ಹೊಂದಿದೆ. ನೆಲ ಅಂತಸ್ತು + 3 ಬಹುಮಹಡಿಯ ಕಾಂಪ್ಲೆಕ್ಸ್ ಇದಾಗಿದೆ. ಸಂಪೂರ್ಣ ಟೈಲ್ಸ್ ಹಾಸುವಿಕೆಯ ನೆಲ, ಪ್ರತೀ ಅಂತಸ್ತಿಗೂ ಲಿಫ್ಟ್ ಸೌಲಭ್ಯ ಇದೆ. ಮೇಲ್ಭಾಗದಲ್ಲಿ ಸಭಾಂಗಣ ನಿರ್ಮಿಸಲಾಗಿದೆ. ಈಗಾಗಲೇ ಬ್ಯಾಂಕ್ ಆಫ್ ಮಹಾರಾಷ್ಟ್ರ, ದಂತ ಚಿಕಿತ್ಸಾಲಯ, ಬ್ಯೂಟಿಪಾರ್ಲರ್ ಗಳು ತೆರೆದಿದ್ದು, ಸೊಸೈಟಿ ಮತ್ತಿತರ ಕಚೇರಿಗಳಿಗೆ ಯೋಗ್ಯವಾದ ಕೊಠಡಿಗಳನ್ನು ಹೊಂದಿದೆ. ತೆರೆದ ಬಾವಿಯ ನೀರಿನ ವ್ಯವಸ್ಥೆ, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯಿದ್ದು, ಪಡೀಲ್ ಜಂಕ್ಷನ್ ನಲ್ಲಿ ನೂತನ ಕಾಂಪ್ಲೆಕ್ಸ್ ಪುತ್ತೂರಿನ ವಾಣಿಜ್ಯ ಕ್ಷೇತ್ರ ಬೆಳವಣಿಗೆಗೆ ಕೊಡುಗೆಯಾಗಿ ಕಂಗೊಳಿಸುತ್ತಿದೆ.

ಶುಭಾರಂಭದ ಪ್ರಯುಕ್ತ ಯಕ್ಷಗಾನ ‘ಶ್ರೀ ದೇವಿ ಮಹಾತ್ಮೆ’
ನೂತನ ಕಾಂಪ್ಲೆಕ್ಸ್ ನ ಉದ್ಘಾಟನೆ ಮೇ 22 ರಂದು ಸಂಜೆ ನಡೆಯಲಿದೆ. ಸುಧೀರ್ ಶೆಟ್ಟಿಯವರ ತೀರ್ಥರೂಪರಾದ ದಯಾನಂದ ಶೆಟ್ಟಿ ಮತ್ತು ಗಣ್ಯರು ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ. ಶುಭಾರಂಭದ ಪ್ರಯುಕ್ತ ಸಂಜೆ 6.00 ಗಂಟೆಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯವರಿಂದ ‘ಶ್ರೀ ದೇವಿ ಮಹಾತ್ನೆ’ ಯಕ್ಷಗಾನ ಬಯಲಾಟ ನಡೆಯಲಿದೆ.