ಬೈಕ್, ಮೊಬೈಲ್, ಶರ್ಟ್, ಚಪ್ಪಲಿ ಬಿಟ್ಟು ನಾಪತ್ತೆಯಾಗಿದ್ದ ಪುತ್ತೂರು ನಗರ ಸಭಾ ಸದಸ್ಯ ರಮೇಶ್ ರೈ ನೆಲ್ಲಿಕಟ್ಟೆ ಮೃತದೇಹ ಪತ್ತೆ!

0

ವಿಟ್ಲ: ಪಾಣೆಮಂಗಳೂರು ಹಳೆ ಸೇತುವೆ ಕೆಳಭಾಗದಲ್ಲಿ ಬೈಕ್, ಮೊಬೈಲ್, ಶರ್ಟ್ ಮತ್ತು ಚಪ್ಪಲಿ ಬಿಟ್ಟು ನಾಪತ್ತೆಯಾಗಿದ್ದ ಪುತ್ತೂರು ನಗರ ಸಭಾ ಸದಸ್ಯ ರಮೇಶ್ ರೈ ನೆಲ್ಲಿಕಟ್ಟೆ ಅವರ ಮೃತದೇಹ ಇದೀಗ ಪತ್ತೆಯಾಗಿದೆ.

ರಮೇಶ್ ರೈ ಅವರು ಇತ್ತೀಚಿಗೆ ನಗರಸಭೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದರು.

ಜೂ.5ರಂದು ಬೆಳಿಗ್ಗೆ ಸುಮಾರು 11 ಗಂಟೆಯಿಂದ ಬೈಕ್ ಹಾಗೂ ಸೊತ್ತುಗಳು ಪಾಣೆಮಂಗಳೂರು ಹಳೆ ಸೇತುವೆ ಕೆಳಭಾಗದಲ್ಲಿ ಅನಾಥವಾಗಿ ಕಂಡು ಬಂದಿದ್ದು, ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕುಟುಂಬದ ಸದಸ್ಯರು,ಪೊಲೀಸರು ಹಾಗೂ ಸ್ಥಳೀಯರು ಆಗಮಿಸಿದ್ದು, ಹುಡುಕಾಟ ಕಾರ್ಯಾಚರಣೆ ನಡೆಸಲಾಗಿತ್ತು. ಇದೀಗ ಅವರ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here