





ಪುತ್ತೂರು: ಸ್ಪಂದನ ಚಾರಿಟೇಬಲ್ ಟ್ರಸ್ಟಿನ ಮಹತ್ವದ 16ನೇ ಯೋಜನೆಯಾದ “ಸ್ಪಂದನ ವಿದ್ಯಾನಿಧಿ ಯೋಜನೆ” ಮತ್ತು ಪರಿಸರ ಸಂರಕ್ಷಣೆ ಸಲುವಾಗಿ “ಸಸಿ ನೆಡುವ” ಕಾರ್ಯಕ್ರಮ ನೂಜಿಬಾಳ್ತಿಲ ಅಡೆಂಜ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.ಕಾರ್ಯಕ್ರಮವನ್ನು ಟ್ರಸ್ಟಿನ ಸ್ಥಾಪಕ ಅಧ್ಯಕ್ಷ ಸುನೀಲ್ ಉದ್ಘಾಟಿಸಿದರು.


ಟ್ರಸ್ಟಿನ ಅಧ್ಯಕ್ಷ ಚಿದಾನಂದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಲಾ ಮುಖ್ಯೋಪಾಧ್ಯಾಯಿನಿ ರೇಖಾ,SDMC ಅಧ್ಯಕ್ಷ ನಿತ್ಯಾನಂದ ಬಲಕ್ಕ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅನಿಲ್ ಕೇರ್ನಡ್ಕ ಭಾಗವಹಿಸಿದರು.





ಇನ್ನೊಬ್ಬ ಮುಖ್ಯ ಅತಿಥಿ ಸರ್ಕಾರಿ ಪದವಿಪೂರ್ವ ಕಾಲೇಜು ಕಾಣಿಯೂರಿನ ಕನ್ನಡ ಉಪನ್ಯಾಸಕ ಜಗದೀಶ್ ಬಾರಿಕೆ “ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳಿಗಾಗುವ ದುಷ್ಪರಿಣಾಮಗಳ” ಬಗ್ಗೆ ವಿಶೇಷ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿ/ನಿಯರಿಗೆ ಉಚಿತ ಶಾಲಾ ಬ್ಯಾಗ್, ಪುಸ್ತಕ ಮತ್ತು ಛತ್ರಿಯನ್ನು ನೀಡಲಾಯಿತು.ಮತ್ತು ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಶಾಲಾ ವಠಾರದಲ್ಲಿ ಸಸಿ ನೆಡಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟಿನ ಸದಸ್ಯರು, ಶಿಕ್ಷಕರ ವೃಂದ ಮತ್ತು ಪೋಷಕರು ಉಪಸ್ಥಿತರಿದ್ದರು.ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಟ್ರಸ್ಟಿನ ಸದಸ್ಯರಾದ ಶರತ್ ವಂದಿಸಿದರು. ಜಗದೀಶ್ ಬಾರಿಕೆ ನಿರೂಪಿಸಿದರು.


            







