








ಪುತ್ತೂರು: ಇದು ನಿನ್ನೆ ಮೊನ್ನೆಯ ಕಥೆಯಲ್ಲ. ಕಳೆದ ಮೂರು ವರ್ಷಗಳಿಂದ ಸಾಲ್ಮರ ಕೊಟೇಚಾ ಹಾಲ್ ಬಳಿಯ ಸೋಮನಾಥ ಶೆಟ್ಟಿ ಎಂಬವರ ಅಂಗಡಿಯೊಳಗೆ ಮಳೆ ನೀರು ನಿರಂತರ ಬರುತ್ತಿದೆ. ಈ ಕುರಿತು ನಗರಸಭೆ ಹಲವು ಶತಪ್ರಯತ್ನದ ಕಾರ್ಯಾಚರಣೆ ನಡೆಸಿದರೂ ಮಳೆ ನೀರು ಹರಿಯುವ ಮೋರಿಯ ಬ್ಲಾಕ್ ಅನ್ನು ತೆರವು ಮಾಡಲು ಸಾಧ್ಯ ಆಗಿಲ್ಲ.





ಸೋಮನಾಥ ಶೆಟ್ಟಿಯವರ ಅಂಗಡಿಯ ಮುಂದೆ ಮಳೆ ನೀರು ಹರಿಯುವ ಚರಂಡಿ ಇದೆ. ಮಳೆ ನೀರು ಚರಂಡಿಯ ಮೂಲಕ ಮುಂದೆ ಮೋರಿಯೊಂದರಿಂದ ಹೋಗಬೇಕಾಗಿದೆ. ಆದರೆ ಮೋರಿಯಲ್ಲಿ ಕಸಗಳು ತುಂಬಿ ಮಳೆ ನೀರು ಹರಿಯಲು ಅಡ್ಡಿಯಾಗಿ ಚರಂಡಿಯಲ್ಲಿ ಮಳೆ ನೀರು ತುಂಬಿ ಅಂಗಡಿಗೆ ನುಗ್ಗುತ್ತಿದೆ. ಕಳೆದ ಮೂರು ವರ್ಷಗಳಿಂದ ಈ ಸಮಸ್ಯೆಯಿದೆ. ಇದಕ್ಕೆ ಇನ್ನೂ ಸೂಕ್ತ ಕ್ರಮ ಸಿಕ್ಕಿಲ್ಲ


            







