ಪುತ್ತೂರು: ಸಾಮತ್ತಡ್ಕದ ದೇವಕೀಕೃಪ ನಿವಾಸಿ ನಿವೃತ್ತ ಎಎಸ್ಐ ಪುರುಷೋತ್ತಮ ಟಿ ಹೆಗ್ಡೆ (72 ವ.) ಇವರು ಅಲ್ಪಕಾಲದ ಅಸೌಖ್ಯದಿಂದ ಇಂದು (ಜೂ.15 ರಂದು) ಮುಂಜಾನೆ 3.15 ಗಂಟೆಗೆ ಸ್ವಗೃಹದಲ್ಲಿ ನಿಧನರಾದರು.
ಇವರು ಮುಲ್ಕಿ ಠಾಣೆಯಲ್ಲಿ ಸೇವೆ ಪ್ರಾರಂಭಿಸಿ ನಂತರ ಕಡಬ, ಪುತ್ತೂರು, ಮಂಗಳೂರು ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿರುತ್ತಾರೆ.
ಪತ್ನಿ ಸುಮಂಗಲಿ, ಪುತ್ರ ವಿನಯರಾಜ್, ಪುತ್ರಿ ವಿದ್ಯಾ, ಸೊಸೆ ರಚನಾ, ಅಳಿಯ ಪ್ರಶೀದ್ ಮತ್ತು ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.