ಕೋಡಿಂಬಾಡಿ ಸ. ಹಿ. ಪ್ರಾ. ಶಾಲೆಯ ಮಂತ್ರಿಮಂಡಲ ರಚನೆ

0

ಪುತ್ತೂರು: ಕೋಡಿಂಬಾಡಿ ಸ. ಹಿ. ಪ್ರಾ. ಶಾಲೆಯ 2025-26 ನೇ ಸಾಲಿನ ಮಂತ್ರಿ ಮಂಡಲ ರಚನೆ ನಡೆಯಿತು.ಶಾಲಾ ಮುಖ್ಯಮಂತ್ರಿಯಾಗಿ ಪುನೀತ್ ಕುಮಾರ್ ಎ, ಮತ್ತು ಉಪ ಮುಖ್ಯಮಂತ್ರಿಯಾಗಿ ಚರಿಶ್ ಆಯ್ಕೆಯಾದರು.

ರಕ್ಷಣಾ ಮಂತ್ರಿಯಾಗಿ ಡಿಕೆಶ್ ಬಿ, ಉಪ ರಕ್ಷಣಾ ಮಂತ್ರಿಯಾಗಿ ಧನ್ವಿತ್, ಶಿಕ್ಷಣ ಮಂತ್ರಿಯಾಗಿ ಅರುಶ್ ಎಸ್. ಎನ್, ಉಪ ಶಿಕ್ಷಣ ಮಂತ್ರಿಯಾಗಿ ನಿಹಾ ಡಿ, ಆರೋಗ್ಯ ಮಂತ್ರಿಯಾಗಿ ಸಾನ್ವಿ ಪ್ರಭು, ಉಪ ಆರೋಗ್ಯ ಮಂತ್ರಿಯಾಗಿ ಮನ್ವಿತ, ವಾರ್ತಾ ಮಂತ್ರಿಯಾಗಿ ಶರಣ್ಯ, ಉಪ ವಾರ್ತಾ ಮಂತ್ರಿಯಾಗಿ ತನಿಷಾ ಟಿ, ಆಹಾರ ಮಂತ್ರಿಯಾಗಿ ಮಿಥುನ್, ಉಪ ಆಹಾರ ಮಂತ್ರಿಯಾಗಿ ರಿತಿಕಾ, ಕ್ರೀಡಾ ಮಂತ್ರಿಯಾಗಿ ಪ್ರಖ್ಯಾತ್, ಉಪ ಕ್ರೀಡಾ ಮಂತ್ರಿಯಾಗಿ ಸಂಭ್ರಮ್ ಡಿ. ಪಿ, ನೀರಾವರಿ ಮಂತ್ರಿಯಾಗಿ ದಿಕ್ಷಿತ್ ಬಿ, ಉಪ ನೀರಾವರಿ ಮಂತ್ರಿಯಾಗಿ ಮನ್ವಿತ್, ತೋಟಗಾರಿಕಾ ಮಂತ್ರಿಯಾಗಿ ಪ್ರದ್ವಿತ್ ಎಸ್, ಉಪ ತೋಟಗಾರಿಕಾ ಮಂತ್ರಿಯಾಗಿ ಗಗನ್, ಸಾಂಸ್ಕೃತಿಕ ಮಂತ್ರಿಯಾಗಿ ಜಶ್ಮಿ, ಉಪ ಸಾಂಸ್ಕೃತಿಕ ಮಂತ್ರಿಯಾಗಿ ವರ್ಷಾ, ಸ್ವಚ್ಛತಾ ಮಂತ್ರಿಯಾಗಿ ಕೃತಿಕ, ಉಪ ಸ್ವಚ್ಛತಾ ಮಂತ್ರಿಯಾಗಿ ಜಿಶ, ವಾಚನಾಲಯ ಮಂತ್ರಿಯಾಗಿ ನಿಹಾಲ್, ಉಪ ವಾಚನಾಲಯ ಮಂತ್ರಿಯಾಗಿ ಚಿನ್ಮಯಿ ಹಾಗೂ ವಿರೋಧ ಪಕ್ಷದ ನಾಯಕನಾಗಿ ಸಮರ್ಥ್ ದೊಡಮನಿ ಆಯ್ಕೆಯಾದರು.

ಇ ವಿ ಎಂ ಮತಯಂತ್ರದ ಮೂಲಕ ಚುನಾವಣೆ ನಡೆಸಲಾಯಿತು. ಚುನಾವಣಾಧಿಕಾರಿ, ಪ್ರಿಸೈಡಿಂಗ್ ಅಧಿಕಾರಿ, ಪೋಲಿಂಗ್ ಅಧಿಕಾರಿಗಳಾಗಿ ಶಾಲಾ ಶಿಕ್ಷಕಿಯರು ಸಹಕರಿಸಿದರು. ಮುಖ್ಯ ಗುರುಗಳಾದ ಬಾಲಕೃಷ್ಣ ಎನ್ ರವರು ಪ್ರಮಾಣ ವಚನ ಬೋಧಿಸಿದರು.

LEAVE A REPLY

Please enter your comment!
Please enter your name here