





ಕಡಬ: ನೂಜಿಬಾಳ್ತಿಲ ಬೆಥನಿ ವಿದ್ಯಾಸಂಸ್ಥೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ ಲಕ್ಷ್ಮಣಗೌಡ ಬಿಳಿನೆಲೆ, ಉಪಾಧ್ಯಕ್ಷರಾಗಿ ಭಾರತಿ ಪಾಲೆತ್ತಡಿ ಆಯ್ಕೆಯಾಗಿದ್ದಾರೆ. ಸದಸ್ಯರಾಗಿ ವಿಕ್ರಮಾದಿತ್ಯ, ಮೀರಾ, ನಿಶಾ, ನಂದ ಕುಮಾರಿ, ಕೃಷ್ಣ, ಭಾರತಿ, ಪುತ್ತು ಕುನ್ಜಿ, ಮಂಜುಳಾ, ಸುರೇಶ ಅಮಿತಾ, ಸುರೇಶ ಬಿಜೇರು, ಶ್ರೀಧರ ಮೀನಾಡಿ ಆಯ್ಕೆಯಾದರು.


ಕಳೆದ ಎರಡು ವರ್ಷಗಳ ಕಾಲ ಅಧ್ಯಕ್ಷರಾಗಿದ್ದ ಶ್ರೀಧರ ಗೌಡ ಗೋಳ್ತಿಮಾರು ಅವರ ಸೇವೆಯನ್ನು ಸ್ಮರಿಸಿ ಅವರಿಗೆ ಧನ್ಯವಾದಗಳನ್ನು ಸಮರ್ಪಿಸಲಾಯಿತು. ಚುನಾವಣೆಯನ್ನು ಸಂಸ್ಥೆಯ ನಿರ್ದೇಶಕರಾದ ರೆ. ವಂ. ಫಾದರ್ ವಿಜೋಯ್ ವರ್ಗೀಸ್ ಅವರ ಮಾರ್ಗದರ್ಶನದಲ್ಲಿ, ಪ್ರಾಂಶುಪಾಲರಾದ ಜೋರ್ಜ್ ಟಿ ಎಸ್ ಮತ್ತು ಮುಖ್ಯ ಗುರುಗಳಾದ ತೋಮಸ್ ಏ ಕೆ ಇವರು ನಡೆಸಿಕೊಟ್ಟರು.















