ಪುತ್ತೂರು: ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮೂವರು ವಿದ್ಯಾರ್ಥಿಗಳು ಎನ್ಎಂಎಂಎಸ್ ವಿದ್ಯಾರ್ಥಿವೇತನಕ್ಕೆ ಆಯ್ಕೆಗೊಂಡಿದ್ದಾರೆ.
ಆರ್ ಮುರುಗದಾಸ್ ಮತ್ತು ಎಂ.ಕನಿಮೊಳಿ ದಂಪತಿ ಪುತ್ರಿ ಲೇಖಶ್ರೀ ಎಂ, ಹಸನ್ಕುಟ್ಟಿ ಮತ್ತು ಆಸ್ಮಾ ಬಿ.ಹಸನ್ ದಂಪತಿ ಪುತ್ರಿ ಹಲೀಮತ್ ಅಮ್ನ, ತುನುಜ ಎಂ.ಎಸ್ ಅವರ ಪುತ್ರಿ ಕನಿಕಾ ಟಿ ಅವರು 2024-25ನೇ ಸಾಲಿನ ಎನ್ಎಂಎಂಎಸ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿ ವಿದ್ಯಾರ್ಥಿವೇತನ ಪಡೆಯಲು ಅರ್ಹರಾಗಿದ್ದಾರೆ ಎಂದು ಸಂಸ್ಥೆ ಪ್ರಾಂಶುಪಾಲ ವಸಂತ ಮೂಲ್ಯ ಅವರು ತಿಳಿಸಿದ್ದಾರೆ.
