ಶ್ರೀ ರಾಮಕುಂಜೆಶ್ವರ ಪ್ರೌಢಶಾಲೆಯಲ್ಲಿ 11ನೇ ವರ್ಷದ ವಿಶ್ವ ಯೋಗ ದಿನಾಚರಣೆ

0

ರಾಮಕುಂಜ: ಶ್ರೀರಾಮಕುಂಜೆಶ್ವರ ಪ್ರೌಢಶಾಲೆಯಲ್ಲಿ 11ನೇ ವರ್ಷದ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಸಾಮೂಹಿಕ ಯೋಗ ಪ್ರದರ್ಶನ ನಡೆಯಿತು.

ಖ್ಯಾತ ರಾಷ್ಟ್ರಮಟ್ಟ ಯೋಗ ತೀರ್ಪುಗಾರರಾದ ವಿಜೇಶ್ ರವರು ವಿದ್ಯಾರ್ಥಿಗಳಿಗೆ ಯೋಗಾಭ್ಯಾಸದ ಕುರಿತಾಗಿ ಮಾಹಿತಿಯ ಜೊತೆಗೆ ಯೋಗ ತರಬೇತಿ ನೀಡಿದರು. ತರಬೇತುದಾರ ವಿಜೇಶ್ ರವರಿಗೆ ಸಂಸ್ಥೆಯ ವತಿಯಿಂದ ಗಣಿತ ಶಿಕ್ಷಕ ವೆಂಕಟೇಶ್ ದಾಂಮ್ಲೆ ಮತ್ತು ದಿನೇಶ್ ರವರು ಶಾಲು ಹಾಕಿ ಗೌರವಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ವೃಕ್ಷಾಸನ ಸ್ಪರ್ಧೆಯನ್ನು ನಡೆಸಲಾಯಿತು. ಇದರಲ್ಲಿ ಉತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಾದ 10ನೇ ತರಗತಿ ರಾಹುಲ್ ಯಶಸ್ ಯಕ್ಷಿತ್ ಮತ್ತು ಒಂಬತ್ತನೇ ತರಗತಿ ಸಿಂಚನ ಎಂಟನೇ ತರಗತಿ ಭುವಿ ಮತ್ತು ಜೀವಿತ ಇವರಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು. ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಪ್ರಪುಲ್ಲರವರು ಯೋಗ ಶಿಕ್ಷಣ ನೀಡಿದ್ದರು.
ಪ್ರೌಢಶಾಲಾ ವಿಭಾಗದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಾಗಿದ್ದರು.

LEAVE A REPLY

Please enter your comment!
Please enter your name here