ಮೇನಾಲ: ಜೂ.14ರಂದು ಸ.ಉ..ಹಿ.ಪ್ರಾ. ಶಾಲೆ ಮೇನಾಲದಲ್ಲಿ ಶಾಲಾ ಮಂತ್ರಿ ಮಂಡಲ ರಚನೆಯಾಯಿತು.
ಶಾಲಾ ನಾಯಕಿಯಾಗಿ ಶರಣ್ಯ, ಉಪಮುಖ್ಯಮಂತ್ರಿಯಾಗಿ ಶಾನ್ವಿಕ.ಎ, ವಿದ್ಯಾ ಮಂತ್ರಿಯಾಗಿ ಕೀರ್ತಿ. ಎಂ, ಉಪವಿದ್ಯಾ ಮಂತ್ರಿಯಾಗಿ ಮಹಮ್ಮದ್ ಮುನ್ಝೀರ್, ಗೃಹಮಂತ್ರಿಯಾಗಿ ಕೃತಿಕ್ ಎಂ, ಉಪಗೃಹಮಂತ್ರಿಯಾಗಿ ಕಾರ್ತಿಕ್ ಎಂ, ನೀರಾವರಿ ಹಾಗೂ ತೋಟಗಾರಿಕಾ ಮಂತ್ರಿಯಾಗಿ ಮಹಮ್ಮದ್ ನೌಫಲ್ ಮತ್ತು ಅಬ್ದುಲ್ ನಾಫಿಹ್, ಸಾಂಸ್ಕೃತಿಕ ಮಂತ್ರಿಯಾಗಿ ಅನುಷಾ ಎನ್ .ಎಚ್.ಮತ್ತು ಎಂ.ಶಿಫಾ ಮರಿಯಂ, ಗ್ರಂಥಾಲಯ ಮಂತ್ರಿಯಾಗಿ ಫಿದಾ ಫಾತಿಮ ಮತ್ತು ಖದೀಜತ್ ಸಫಾ, ಸ್ವಚ್ಚತಾ ಮಂತ್ರಿ ಯಾಗಿ ಮಹಮ್ಮದ್ ಇಝಾಂ ಮತ್ತು ಬ್ರಿಜೇಶ್, ಹಾಗೂ ಆಹಾರ ಮಂತ್ರಿಯಾಗಿ ಧನ್ಯ ಶ್ರೀ, ಚೇತನಾ .ಎಂ ಹಾಗೂ ಹಾರಿಫಾ ಎಂ.ಎ.ಆಯ್ಕೆಯಾಗಿರುತ್ತಾರೆ.
