ಪುತ್ತೂರು: ದೇವಾಲಯ ಸಂವರ್ಧನಾ ಸಮಿತಿ ಕರ್ನಾಟಕ ಪುತ್ತೂರು ಇದರ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಸರಸ್ವತಿಯ ಮಹತ್ವ ಸಾರುವ ಬಗ್ಗೆ ಮತ್ತು ಅನುಗ್ರಹ ಬೇಡುವ ಬಗ್ಗೆ ಪುತ್ತೂರು ತಾಲೂಕಿನ ಗ್ರಾಮ ದೇವಸ್ಥಾನಗಳಲ್ಲಿ ಶ್ರೀ ಸರಸ್ವತಿ ವಂದನೆ ಕಾರ್ಯಕ್ರಮ ಮಾಡುವ ಕುರಿತು ಜು.2 ರಂದು ಸಂಜೆ ಗಂ.5 ಕ್ಕೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಅನ್ನಛತ್ರದ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ.
ನಮ್ಮ ಸನಾತನ ಹಿಂದೂ ಧರ್ಮದಲ್ಲಿ ಶ್ರೀ ಸರಸ್ವತಿ ದೇವಿಯನ್ನ ವಿದ್ಯಾಧಿದೇವತೆಯಾಗಿ ಪೂಜಿಸಲಾಗಿದೆ. ಈ ನಿಟ್ಟಿನಲ್ಲಿ ನಮ್ಮ ಈಗಿನ ವಿದ್ಯಾರ್ಥಿಗಳಿಗೆ ಸರಸ್ವತಿಯ ಮಹತ್ವ ಸಾರುವ ಬಗ್ಗೆ ಮತ್ತು ಅನುಗ್ರಹ ಬೇಡುವ ಬಗ್ಗೆ ಪುತ್ತೂರು ತಾಲೂಕಿನ ಗ್ರಾಮ ದೇವಸ್ಥಾನಗಳಲ್ಲಿ ವಿದ್ಯಾರ್ಥಿಗಳನ್ನು ಬರಮಾಡಿ, ಅವರ ಹೆಸರಿನಲ್ಲೇ ಸಂಕಲ್ಪ ಮಾಡಿಸಿ ದೇವಿಯ ಅರ್ಚನೆ ಮಾಡಿ ಪ್ರಸಾದ ವಿತರಣೆ ಕಾರ್ಯಕ್ರಮವಾಗಿ ಶ್ರೀ ಸರಸ್ವತಿ ವಂದನೆ ನಡೆಯಲಿದೆ.
ತಾಲೂಕಿನಾದ್ಯಂತ ಈ ಕಾರ್ಯಕ್ರಮ ನಡೆಸುವ ಬಗ್ಗೆ ಪೂರ್ವ ತಯಾರಿ ಮಾಡಲು ಸಭೆ ನಡೆಸಲಾಗುವುದು ಎಂದು ದೇವಾಲಯ ಸಂವರ್ಧನಾ ಸಮಿತಿ ಕರ್ನಾಟಕ ಇದರ ಪುತ್ತೂರು ನಗರ ಮತ್ತು ಗ್ರಾಮಾಂತರ ಸಂಚಾಲಕರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.