ಪುತ್ತೂರು: ಸಮಾಜದ ವಿದ್ಯಮಾನಗಳಿಗೆ ಕನ್ನಡಿಯಾಗಿರುವ ಸ್ವಸ್ಥ- ರಾಷ್ಟ್ರ ನಿರ್ಮಾಣಕ್ಕೆ ಮುನ್ನುಡಿಯಾಗಿರುವ ಮಾಧ್ಯಮ ಸ್ನೇಹಿತರೊಂದಿಗೆ ವಿವೇಕಾನಂದ ಪದವಿಪೂರ್ವ ಕಾಲೇಜಿನ ವತಿಯಿಂದ ಪತ್ರಿಕಾ ದಿನಾಚರಣೆಯನ್ನು ವಿನೂತನ ರೀತಿಯಲ್ಲಿ ಆಚರಿಸಲಾಯಿತು. ಪ್ರಾಂಶುಪಾಲರ ಹಾಗೂ ಉಪನ್ಯಾಸಕರುಗಳ ಮಾರ್ಗದರ್ಶನದಲ್ಲಿ ಪುತ್ತೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಪತ್ರಿಕಾ ಕಚೇರಿಗಳಿಗೆ ಕಾಲೇಜಿನ ವಿದ್ಯಾರ್ಥಿ ಸಂಘದ ಪ್ರತಿನಿಧಿಗಳು ಭೇಟಿ ನೀಡಿ ಶುಭಾಶಯ ಪತ್ರದ ಜೊತೆಗೆ ಸಿಹಿತಿಂಡಿ ವಿತರಿಸಿ ಪತ್ರಿಕಾ ದಿನವನ್ನು ಆಚರಿಸಿದರು.
