





ಕಡಬ: ಕುಂತೂರುಪದವು ಸಂತಜಾರ್ಜ್ ಪ್ರೌಢಶಾಲಾ 2025-26ನೇ ಶೈಕ್ಷಣಿಕ ಸಾಲಿನ ಶಾಲಾ ಸರ್ಕಾರ ರಚನೆಗೆ ಚುನಾವಣೆ ನಡೆಯಿತು.


ಶಾಲಾ ನಾಯಕನಾಗಿ 10ನೇ ತರಗತಿಯ ಮೋಕ್ಷಿತ್ ಹಾಗೂ ಉಪನಾಯಕಿಯಾಗಿ 10ನೇ ತರಗತಿಯ ಫಾತಿಮ್ ಕೌಶಿಯ ಆಯ್ಕೆಯಾದರು. ಉಳಿದಂತೆ ಶಾಲಾ ಉಪನಾಯಕನಾಗಿ ಕೇಶಿತ್, ಆರೋಗ್ಯ ಮಂತ್ರಿಯಾಗಿ ಸಾನ್ವಿತ್, ಕ್ರೀಡಾಮಂತ್ರಿಯಾಗಿ ಅನನ್ಯ, ಶಿಕ್ಷಣ ಮಂತ್ರಿಯಾಗಿ ಖತೀಜತುಲ್ ಅಫೆರಾ, ನೀರಾವರಿ ಮಂತ್ರಿಯಾಗಿ ಧನುಶ್, ಸ್ವಚ್ಛತಾ ಮಂತ್ರಿಯಾಗಿ ಹರ್ಷಿತ್, ತೋಟಗಾರಿಕಾ ಮಂತ್ರಿಯಾಗಿ ಉಲ್ಲಾಸ್ ಮತ್ತು ವಿರೋಧ ಪಕ್ಷದ ನಾಯಕಿಯಾಗಿ ವರ್ಷ 10ನೇ ಆಯ್ಕೆಯಾದರು. ಶಾಲಾ ಮುಖ್ಯಗುರು ಹರಿಶ್ಚಂದ್ರ ಕೆ.ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಅಧ್ಯಾಪಕರು ಸಹಕರಿಸಿದರು.












