ಪುತ್ತೂರು: ಕೌಕ್ರಾಡಿ ಗ್ರಾಮದ ಕಣ್ಣಹಿತ್ತಿಲು ನಿವಾಸಿ ಹಾಗೂ ಕೌಕ್ರಾಡಿ ಪಂಚಾಯತಿನ ಮಾಜಿ ಉಪಾಧ್ಯಕ್ಷ ಕೆ. ರಾಜು(63) ಅವರು ಅಲ್ಪಕಾಲದ ಅನಾರೋಗ್ಯದಿಂದ ಜು.4ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಕೃಷಿ ಮತ್ತು ಹೈನುಗಾರಿಕೆಯಲ್ಲಿ ವೃತ್ತಿ ಬದುಕನ್ನು ನಡೆಸುತ್ತಿದ್ದು, ರಾಜಕೀಯ ಕ್ಷೇತ್ರದಲ್ಲಿಯೂ ಸಕ್ರಿಯರಾಗಿದ್ದರು.ಮೃತರು ಪತ್ನಿ, ಇಬ್ಬರು ಗಂಡುಮಕ್ಕಳು, ಒಬ್ಬ ಹೆಣ್ಣುಮಗಳು ಹಾಗೂ ಸಹೋದರ-ಸಹೋದರಿಯರು ಅಗಲಿದ್ದಾರೆ.