ಪುತ್ತೂರು: ಅನಾರೋಗ್ಯದಿಂದ ಬಳಲುತ್ತಿರುವ ಸರ್ವೆ ಗ್ರಾಮದ ನೆಕ್ಕಿಲು ನಿವಾಸಿ ನಾಗಪ್ಪ ಎಂಬವರಿಗೆ ರೋಟರಿ ಕ್ಲಬ್ ವತಿಯಿಂದ ನೀಡಿದ ವ್ಹೀಲ್ ಚೆಯರ್ನ್ನು ರೋಟರಿ ಕ್ಲಬ್ನ ಸರ್ವೀಸ್ ನಿರ್ದೆಶಕ ಪ್ರಜ್ವಲ್ ರೈ ನೇತೃತ್ವದಲ್ಲಿ ಹಸ್ತಾಂತರಿಸಲಾಯಿತು.
ಕಾಂಗ್ರೆಸ್ ಬೂತ್ ಅಧ್ಯಕ್ಷ ಹಮೀದ್ ನೇರೋಳ್ತಡ್ಕ, ಗಣೇಶ್ ನೇರೋಳ್ತಡ್ಕ, ಚಂದ್ರಶೇಖರ ನೆಕ್ಕಿಲು, ಮುಂಡೂರು ಗ್ರಾ.ಪಂ ಸದಸ್ಯ ಮಹಮ್ಮದ್ ಆಲಿ ಉಪಸ್ಥಿತರಿದ್ದರು.