ಅಧ್ಯಕ್ಷ:ರೋ.ವಿನೀತ್, ಕಾರ್ಯದರ್ಶಿ:ರೋ.ನವನೀತ್, ಸಭಾಪತಿ:ರೊ.ಬಿ.ವಿ.ಕಿಶನ್
ಪುತ್ತೂರು: ಅಂತಾರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ವ್ಯಾಪ್ತಿಯ ಜಿಲ್ಲೆಯ ಹಿರಿಯ ಕ್ಲಬ್ ಎನಿಸಿದ ಹಾಗೂ ಡೈಮಂಡ್ ಜ್ಯುಬಿಲಿ ವರ್ಷವನ್ನು ಆಚರಿಸುತ್ತಿರುವ ರೋಟರಿ ಕ್ಲಬ್ ಪುತ್ತೂರು ಇದರ ಅಂಗಸಂಸ್ಥೆ ರೋಟರಾಕ್ಟ್ ಕ್ಲಬ್ ಪುತ್ತೂರು ಇದರ 2025-25ನೇ ಸಾಲಿನ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ನಡೆದಿದೆ.
ಅಧ್ಯಕ್ಷರಾಗಿ ರೋ.ವಿನೀತ್ ,ಕಾರ್ಯದರ್ಶಿಯಾಗಿ ರೋ.ನವನೀತ್, ಸಭಾಪತಿ ಯಾಗಿ ರೊ.ಬಿ.ವಿ ಕಿಶನ್ ಕೋಶಾಧಿಕಾರಿಕಾರಿಯಾಗಿ ರೋ.ಗಣೇಶ್ ಕಲ್ಲರ್ಪೆ ಆಯ್ಕೆಯಾಗಿದ್ದಾರೆ. ಉಳಿದಂತೆ ಉಪಾಧ್ಯಕ್ಷೆ ರೋ.ಸುಕನ್ಯಾ, ನಿಕಟಪೂರ್ವ ಅಧ್ಯಕ್ಷರಾಗಿ ರೋ.ಪಿ.ವಿ ಸುಬ್ರಮಣಿ, ಜೊತೆಕಾರ್ಯದರ್ಶಿ ಹರ್ಷಿತ್ ಆಚಾರ್ಯ, ಪಿ.ಆರ್.ಓ ರೋ.ನವೀನ್ ರೈ ಬನ್ನೂರು, ಕ್ಲಬ್ ಎಡ್ವಸರ್ ರೋ.ನವೀನ್ ಚಂದ್ರ, ಸಂಘಸೇವಾ ನಿರ್ದೇಶಕ ರೋ.ಅಖೀಲ್, ಸಮುದಾಯ ಸೇವಾ ನಿರ್ದೇಶಕ ರೋ.ಕಿಶೋರ್ ,ವೃತ್ತಿ ಸೇವಾ ನಿರ್ದೇಶಕ ರೋ.ಸುಶಾಂತ್,ಅಂತರಾಷ್ಟ್ರೀಯ ಸೇವಾ ನಿರ್ದೇಶಕ ಹಿಮಾಂಶ್, ಸರ್ಜೇಂಟ್ ಆರ್ಮ್ಸ್ ರೋ.ಮುರಳಿ, ಕ್ರೀಡಾ ಕಾರ್ಯದರ್ಶಿ ರೋ.ವಿಶಾಲ್ .ಎ, ಕ್ಲಬ್ ಎಡಿಟರ್ ರೋ.ಎಡ್ವರ್ಡ್, ಬುಲೆಟಿನ್ ಸಂಪಾದಕ ರೋ.ವಿಖ್ಯಾತ್, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ರೋ.ನವ್ಯ ಮತ್ತು ರೋ.ಪ್ರಸಕ್ತ ರೈ , ಕ್ಲಬ್ ಕೋ- ಒಡಿನೇಟರ್ ಆಗಿ ರೋ. ಮಹೇಶ್ ಚಂದ್ರ ಮತ್ತು ರೋ.ಶಶಿಧರ್ ಮಾವಿನಕಟ್ಟೆ ಯವರು ಆಯ್ಕೆಯಾಗಿದ್ದಾರೆ.
ಪುತ್ತೂರು ರೋಟರಾಕ್ಟ್ ಕ್ಲಬಿನ ಇತಿಹಾಸ
ಪುತ್ತೂರು ರೋಟರಿ ಸಂಸ್ಥೆಯ ಅಧೀನಕ್ಕೆ ಒಳಪಡುವ ರೋಟರಾಕ್ಟ್ ಕ್ಲಬ್ ಪುತ್ತೂರು 1978ರಲ್ಲಿ ಸ್ಥಾಪನೆಗೊಂಡು ಸ್ಥಾಪಕ ಅದ್ಯಕ್ಷರಾಗಿ ಜಿ.ಎಲ್.ಜುವೆಲ್ಲರ್ಸ್ ಬಲರಾಮ ಆಚಾರ್ಯ ಆಯ್ಕೆಯಾಗಿದ್ದರು. ಈಗ 47ನೇ ವರ್ಷವನ್ನು ಯಶಸ್ವಿಯಾಗಿ ಪೂರೈಸಿ 48ನೇ ವರ್ಷಕ್ಕೆ ದಾಪುಕಾಲು ಇಡುತ್ತಿದೆ. ಇನ್ನೂ ಕೇವಲ ಎರಡು ವರ್ಷದಲ್ಲಿ ಸುವರ್ಣ ಮಹೋತ್ಸವವನ್ನು ಆಚರಿಸಲಿರುವ ರೋಟರಾಕ್ಟ್ ಕ್ಲಬ್ ಪುತ್ತೂರು ರೋಟರಾಕ್ಟ್ ಜಿಲ್ಲೆ 3181 ಇದರ ಅತ್ತ್ಯುತ್ತಮ ಕ್ಲಬ್ ಆಗಿ ಮೂಡಿ ಬಂದಿದೆ.ತನ್ನ ಮಾತೃ ಸಂಸ್ಥೆ ಪುತ್ತೂರು ರೋಟರಿಗೆ ಹಲವು ಸದಸ್ಯರನ್ನು ಮತ್ತು ಐದು ಜಿಲ್ಲಾ ಪ್ರತಿನಿಧಿಗಳನ್ನು ನೀಡಿದ ಹೆಮ್ಮೆ ನಮ್ಮದು. ರೋಟರಾಕ್ಟ್ ಕ್ಲಬ್ ಪುತ್ತೂರು ಸಮಾಜದಲ್ಲಿ ಒಂದು ಉತ್ತಮ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಸೇವಾ ಮನೋಭಾವದ ಹುರುಪುಲ್ಲ ಯುವ ಸಮುದಾಯವನ್ನು ಹೊಂದಿರುವ ರೋಟರಾಕ್ಟ್ ಕ್ಲಬ್ ಪುತ್ತೂರು 2025-26ನೇ ಸಾಲಿನಲ್ಲಿ ರೋಟರಾಕ್ಟ್ ಜಿಲ್ಲಾ ಕಮಿಟಿಗೆ ಅತೀ ಹೆಚ್ಚು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಮತ್ತು 2025-26ನೇ ಸಾಲಿನಲ್ಲಿ ಅಧ್ಯಕ್ಷರಾದ ವಿನೀತ್ ಮತ್ತು ಅವರ ತಂಡ ಸಭಾಪತಿಯವರ ಮಾರ್ಗದರ್ಶನದ ಮೂಲಕ ಕ್ಲಬಿನ ಹೆಸರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತ್ತಿಸುವಂತೆ ಮಾಡಲಿದ್ದಾರೆ.
ಜುಲೈ 6 ರಂದು ಪದಪ್ರದಾನ
ರೋಟರಾಕ್ಟ್ ಕ್ಲಬ್ ಪುತ್ತೂರು ಮತ್ತು ರೋಟರಾಕ್ಟ್ ಕ್ಲಬ್ ಪ್ರಗತಿ ಪ್ಯಾರಮೇಡಿಕಲ್ ಜಂಟಿಯಾಗಿ ರೋಟರಿ ಕ್ಲಬ್ ಪುತ್ತೂರಿನ ಸಹಯೋಗದಲ್ಲಿ ಜುಲೈ 6 , ಚುಂಚಶ್ರೀ ಸಭಾಭವನದಲ್ಲಿ ಬೆಳಿಗ್ಗೆ 10:00 ಗಂಟೆಗೆ ಪದಪ್ರದಾನ ಕಾರ್ಯಕ್ರಮ ಜರಗಲಿರುವುದು. ಮಾತೃ ಸಂಸ್ಥೆ ರೋಟರಿ ಕ್ಲಬ್ ಪುತ್ತೂರು ಇದರ ಅಧ್ಯಕ್ಷ ರೊ.ಡಾ.ಶ್ರೀಪ್ರಕಾಶ್ ನೂತನ ಪದಾಧಿಕಾರಿಗಳಿಗೆ ಪದಪ್ರದಾನ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಉಪ ಜಿಲ್ಲಾ ಪ್ರತಿನಿಧಿ ರೋ.ಚರಿಷ್ಮಾ ಕೊಲೇರಾ ,ರೋಟರಿ ಕ್ಲಬ್ ಪುತ್ತೂರು ಕಾರ್ಯದರ್ಶಿ ರೊ.ಸುಬ್ಬಪ್ಪ ಕೈಕಂಬ,ಕೆನರಾ ವಲಯ ಪ್ರತಿನಿಧಿರೋ ಸುಬ್ರಮಣಿ, ಯುವಜನ ಸೇವಾ ನಿರ್ದೇಶಕ ರೊ.ಸುಜೀತ್.ಡಿ.ರೈ ಮತ್ತು ಸಭಾಪತಿಗಳು ಭಾಗವಹಿಸಲಿದ್ದಾರೆ.