ಕೊಟ್ಟಿಬೆಟ್ಟು ಏಳ್ನಾಡುಗುತ್ತು ತರವಾಡಿನ ಸಮೀಪದ ಗದ್ದೆಯಲ್ಲಿ ಪರಿವಾರ ಬಂಟರ ಸಂಘದ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮದ ಉದ್ಘಾಟನೆ

0

ಪುತ್ತೂರು: ತೆಂಕಿಲ ಕೊಟ್ಟಿಬೆಟ್ಟು ಏಳ್ನಾಡುಗುತ್ತು ತರವಾಡಿನ ಸಮೀಪದ ಶಶಿಧರ್ ನಾೖಕ್‌ ರವರ ಗದ್ದೆಯಲ್ಲಿ ಪರಿವಾರ ಬಂಟರ ಸಂಘ ಪುತ್ತೂರು ವಲಯ, ಮಹಿಳಾ ವೇದಿಕೆ ಮತ್ತು ಯುವ ಪರಿವಾರ ಬಂಟರ ವೇದಿಕೆ ಪುತ್ತೂರು ವಲಯದ ಸಹಭಾಗಿತ್ವದಲ್ಲಿ ಜು.6 ರಂದು ಬೆಳಿಗ್ಗೆ 9 ಕ್ಕೆ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮ ಉದ್ಘಾಟನೆ ಗೊಂಡಿತು.

ಕಾರ್ಯಕ್ರಮವನ್ನು ಕರ್ನಾಟಕ ಬ್ಯಾಂಕ್ ಮಂಗಳೂರಿನ ಸೀನಿಯರ್ ಮ್ಯಾನೇಜರ್ ಜಯರಾಮ ನಾೖಕ್‌ ಉದ್ಘಾಟಿಸಿದರು,ಪರಿವಾರ ಬಂಟರ ಸಂಘದ ಕೇಂದ್ರ ಸಸಮಿತಿಯ ಪ್ರಧಾನ ಕಾರ್ಯದರ್ಶಿ ಮನೋಹರ್ ನಾೖಕ್‌ ಕೊಳಕ್ಕಿಮಾರ್ ಅಧ್ಯಕ್ಷತೆ ವಹಿಸಿದ್ದರು. ನೆಹರೂನಗರ ಸಮೃದ್ದಿ ಕನ್‌ಸ್ಟ್ರಕ್ಷನ್‌ನ ಸುಧೀರ್ ಪ್ರಸಾದ್ ಎ., ಪರಿವಾರ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ನಿರ್ದೇಶಕ ಹರೀಶ್ ನಾೖಕ್‌ ಅಜೇಯನಗರ,ಪರಿವಾರ ಬಂಟರ ಸಂಘದ ಪುತ್ತೂರು ವಲಯದ ಗೌರವಾಧ್ಯಕ್ಷ ಸುಧಾಕರ್ ಕೆ.ಪಿ ಅಧ್ಯಕ್ಷ ಸರ್ವೇಶ್ ಪಾದೆ, ಮಹಿಳಾ ವೇದಿಕೆಯ ಅಧ್ಯಕ್ಷೆ ಸುಪ್ರಭಾ ನಾೖಕ್‌, ಯುವ ಪರಿವಾರ ಬಂಟರ ವೇದಿಕೆಯ ಅಧ್ಯಕ್ಷ ನಿರೋಷ್ ನಾೖಕ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉದ್ಘಾಟನೆಯ ಬಳಿಕ ಕೆಸರುಗದ್ದೆಯಲ್ಲಿ ವಿವಿಧ ಅಟೋಟ ಸ್ಪರ್ಧೆಗಳು ಪ್ರಾರಂಭವಾದವು. ಸಂಘದ ಪದಾಧಿಕಾರಿಗಳು, ಸಮಾಜ ಬಾಂಧವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here