ಬೆಳ್ಳಾರೆ ಶಾಖೆ ಉನ್ನತ ಶಾಖೆಯಾಗಿ ಮೂಡಿಬಂದಿದೆ: ಚಿದಾನಂದ ಬೈಲಾಡಿ
ಪುತ್ತೂರು: ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಪುತ್ತೂರು ಇದರ ಬೆಳ್ಳಾರೆ ಶಾಖೆಯು ಎರಡು ವರ್ಷವನ್ನು ಯಶಸ್ವಿಯಾಗಿ ಪೂರೈಸಿ 3 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಪ್ರಯುಕ್ತ ಜು.06 ರಂದು ಬೆಳಿಗ್ಗೆ ಕಚೇರಿಯಲ್ಲಿ ಗಣಹೋಮ ಹಾಗೂ ಲಕ್ಷ್ಮೀಪೂಜೆ ನಡೆದು, ಬಳಿಕ ಸಭೆ ನಡೆಯಿತು.

ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿಯವರು ಮಾತನಾಡಿ, ಸಂಘದ ಪ್ರತೀ ಶಾಖೆಯಲ್ಲಿ ಶಾಖೆ ಪ್ರಾರಂಭದ ದಿನವನ್ನು ವಾರ್ಷಿಕ ದಿನವಾಗಿ ಆಚರಿಸುತ್ತೇವೆ.ಧಾರ್ಮಿಕ ಕಾರ್ಯಕ್ರಮದ ಮೂಲಕ ನಾವು ಆಚರಿಸುತ್ತೇವೆ.ಬೆಳ್ಳಾರೆ ಶಾಖೆ 2023 ರಲ್ಲಿ ಪ್ರಾರಂಭಗೊಂಡಿದ್ದು ಶಾಖೆ ಸಾಕಷ್ಟು ಬೆಳವಣಿಗೆಯನ್ನು ಕಂಡಿದೆ. ಎಲ್ಲಾ ಶಾಖೆಗಳಿಗೆ ನಾವು ಟಾರ್ಗೆಟನ್ನು ಕೊಡುತ್ತೇವೆ. ಅದನ್ನು ಮೀರಿ ದಾಖಲೆಯ ವ್ಯವಹಾರವನ್ನು ಶಾಖೆಗಳು ಮಾಡುತ್ತಿದೆ. ಬೆಳ್ಳಾರೆ ಶಾಖೆಯು ಉತ್ತಮ ವ್ಯವಹಾರವನ್ನು ಮಾಡುತ್ತಿದ್ದು ಡೆಪಾಸಿಟ್, ಸಾಲ ನೀಡುವುದು,ವಸೂಲಾತಿಯಲ್ಲಿ ಉತ್ತಮ ಸಾಧನೆ ಮಾಡುತ್ತಿದೆ ಎಂದು ಹೇಳಿದರು.
ಸಲಹಾ ಸಮಿತಿ ಅಧ್ಯಕ್ಷ ಸತೀಶ್ ಪಾಂಬಾರು ಸ್ವಾಗತಿಸಿ ಸಂಸ್ಥೆಗೆ ಶುಭಕೋರಿದರು. ಮಾತೃಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ ಶುಭಹಾರೈಸಿ ಮಾತನಾಡಿದರು. ಸಂಘವು ಯಶಸ್ವಿಯಾಗಿ ನಡೆಯಲು ಸಹಕರಿಸಿದ ಸಲಹಾ ಸಮಿತಿಯ ನಿರ್ದೇಶಕರು ಹಾಗೂ ಶಾಖೆಯ ಸಿಬ್ಬಂದಿಗಳನ್ನು ಗೌರವಿಸಲಾಯಿತು. ಬೆಳ್ಳಾರೆ ಶಾಖೆಯಿಂದ ಕಣಿಯೂರು ಶಾಖೆಗೆ ವರ್ಗಾವಣೆಗೊಂಡ ಶಿವಕುಮಾರ್ ರವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ, ನಿರ್ದೇಶಕರಾದ ಪ್ರವೀಣ್ ಕುಂಟ್ಯಾನ, ಸಲಹಾ ಸಮಿತಿ ಉಪಾಧ್ಯಕ್ಷ ಲೋಕೇಶ್ ಚಾಕೊಟೆ, ಮುಖ್ಯಕಾರ್ಯನಿರ್ವಹಣಾಧಿಕಾರಿ ಸುಧಾಕರ ಕೆ ಉಪಸ್ಥಿತರಿದ್ದರು. ಶಾಖೆಯ ಶಾಖಾ ಪ್ರಬಂಧಕ ಕಾರ್ತಿಕ್ ಎಂ.ವಂದಿಸಿದರು.
ಕುಂಬ್ರ ಶಾಖೆಯ ಪ್ರಬಂಧಕ ಹರೀಶ್ ವೈ, ವಿಟ್ಲ ಶಾಖೆಯ ಪ್ರಬಂಧಕ ದಿನೇಶ್, ಬೆಳ್ಳಾರೆ ಶಾಖೆಯ ಸಲಹಾ ಸಮಿತಿ ಸದಸ್ಯರಾದ ನಾರಾಯಣ ಗೌಡ ಆರ್ವಾರ,ಉಮೇಶ್ ಕೆ.ಎಂ.ಬಿ ಕಾನಾವು, ವಾಸುದೇವ ಗೌಡ ನಡ್ಕ, ಮುರಳೀಧರ ಕೆಮ್ಮಾರ, ರವೀಂದ್ರ ಮರಕ್ಕಡ, ಪದ್ಮನಾಭ ಬೀಡು, ರವಿನಾಥ ಮಡ್ತಿಲ, ಕಲಾವತಿ ಎನ್.ಎಸ್ ,ಪ್ರಶಾಂತ್ ತಂಟೆಪ್ಪಾಡಿ, ಕೃಷ್ಣಪ್ಪ ಗೌಡ ಕೋಡ್ತುಗುಳಿ, ಕೂಸಪ್ಪ ಗೌಡ ಮುಗುಪ್ಪು, ಎಲ್ಯಣ್ಣ ಗೌಡ ಕುಳ್ಳಂಪಾಡಿ ಹಾಗೂ ಶಾಖೆಯ ಸಿಬ್ಬಂದಿ ವರ್ಗದವರು ಮತ್ತು ಗ್ರಾಹಕರು ಉಪಸ್ಥಿತರಿದ್ದರು.