ನವೋದಯ, ಸೈನಿಕ, ಮೊರಾರ್ಜಿ ಶಾಲಾ ಪ್ರವೇಶ ಪರೀಕ್ಷಾ ತರಬೇತಿ ಪ್ರಾರಂಭಿಸಿದ ವಿದ್ಯಾಮಾತಾ

0

ಬಾಲ್ಯದಲ್ಲೇ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ವಿದ್ಯಾಮಾತಾ ದಾರಿ ದೀಪ – ಮಾಲಿನಿ ಕಶ್ಯಪ್

ಪುತ್ತೂರು : ಕಳೆದ ಹಲವಾರು ವರ್ಷಗಳಿಂದ ಗ್ರಾಮೀಣ ಪ್ರದೇಶದ ಯುವ ಜನತೆಗೆ ಅವರ ಸುಂದರ ಬದುಕನ್ನು ಸುಭದ್ರಗೊಳಿಸುವಲ್ಲಿ ನಿರಂತರ ಮಾರ್ಗದರ್ಶನ ನೀಡುತ್ತಾ , ಹಲವಾರು ಸರಕಾರಿ ನೇಮಕಾತಿಗಳಲ್ಲಿ ಸರಳ ,ಸುಲಭ ತರಬೇತಿ ಮುಖೇನ ಹುದ್ದೆಗಳನ್ನು ಯುವ ಜನತೆ ಪಡೆಯಲು ಸ್ಪೂರ್ತಿ ನೀಡುತ್ತಿರುವ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆ ವಿದ್ಯಾಮಾತಾ ಅಕಾಡೆಮಿಯಲ್ಲಿ ನವೋದಯ, ಸೈನಿಕ, ಮೊರಾರ್ಜಿ ಸೇರಿದಂತೆ ವಿವಿಧ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗಳಿಗೆ ಪೂರ್ವ ಸಿದ್ದತಾ ತರಬೇತಿಗಳು ಇದೀಗ ಪ್ರಾರಂಭಗೊಂಡಿವೆ.


ಮುಖ್ಯ ಅತಿಥಿ ಜೆ ಸಿ ಐ ಪುತ್ತೂರು ಇದರ ಸದಸ್ಯೆ , ಶಿಶು ಮಂದಿರ ಪುತ್ತೂರು ಇದರ ಶ್ರೀ ಕೃಷ್ಣ ಜನ್ಮಾಷ್ಠಮಿ 2025ರ ಉಪಾಧ್ಯಕ್ಷೆ ಹಾಗೂ ಲಶ್ ಪ್ಯಾಶನ್ ಇದರ ಮಾಲಕಿ ಮಾಲಿನಿ ಕಶ್ಯಪ್ ಮಾತನಾಡಿ , ಸ್ಥಳೀಯ ಮಟ್ಟದಲ್ಲಿ ಚಿಕ್ಕ ವಯಸ್ಸಿನ ಮಕ್ಕಳಿಗೆ ಪೂರಕವಾದ ತರಬೇತಿ ನೀಡಿ , ಉತ್ತಮ ರೀತಿಯಲ್ಲಿ ಮಾರ್ಗದರ್ಶನ ನೀಡುತ್ತಿರುವ ಅಕಾಡೆಮಿಯ ಕಾರ್ಯವು ಎಲ್ಲರಿಗೂ ಪ್ರೇರಣೆಯಾಗಿರುವಂಥದ್ದು. ನಾವೆಲ್ಲರೂ ವಿದ್ಯಾಮಾತಾ ಅಕಾಡೆಮಿಯ ಅತ್ಯುತ್ತಮ ಕಾರ್ಯಕ್ಕೆ ಕೈ ಜೋಡಿಸೋಣವೆಂದು ಹೇಳಿ , ಅಕಾಡೆಮಿಯಿಂದ ಜರುಗಿರುವಂತಹ ಕಾರ್ಯ ಚಟುವಟಿಕೆಗಳನ್ನು ಗುರುತಿಸಿ ,ಶ್ಲಾಘಿಸಿ , ಮೆಚ್ಚುಗೆ ವ್ಯಕ್ತಪಡಿಸಿದರು.


ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಕಾಡೆಮಿ ಆಡಳಿತ ನಿರ್ದೇಶಕ ಭಾಗ್ಯೇಶ್ ರೈ ಮಾತನಾಡಿ , ಮಕ್ಕಳು ದಾರಿ ತಪ್ಪುವ ಈ ಕಾಲಘಟ್ಟದಲ್ಲಿ ಬಾಲ್ಯದಲ್ಲೇ ಅವರಿಗೆ ಭವಿಷ್ಯದ ಕನಸನ್ನು ಬಲವಾಗಿ ಬಿತ್ತಿ , ಉನ್ನತವಾದ ಸ್ಥಾನಮಾನವನ್ನು ಪಡೆಯಲು ನವೋದಯ, ಸೈನಿಕ್ ಮೊದಲಾದ ಪ್ರವೇಶ ಪರೀಕ್ಷೆಗಳಿಗೆ ತರಬೇತಿ ನೀಡುತ್ತಾ ಮಕ್ಕಳಲ್ಲಿ ಅರಿವು ಮೂಡಿಸಿ , ಭವಿಷ್ಯದಲ್ಲಿ ಯಶಸ್ವಿಯಾಗಿ ಮುನ್ನಡೆದರೇ ನಮಗೆ ಅದೇ ಅತೀವ ಸಂತಸದ ಸಂಗತಿಯೆಂದರು. ಇಂತಹ ಬೆಳವಣಿಗೆಯೂ ಅಕಾಡೆಮಿಯ ಇನ್ನಷ್ಟೂ ಯೋಜನೆಗಳಿಗೆ ಆದರ್ಶವಾಗಬಲ್ಲದು , ವಿದ್ಯಾರ್ಥಿಗಳಿಗೂ ಮತ್ತಷ್ಟೂ ಅರಿವು ಮೂಡಲು ಸಹಕಾರಿಯೆಂದು ಹೇಳಿ , ಹಲವಾರು ರೀತಿಯ ತರಬೇತಿಗಳ ಕುರಿತು ಮಾಹಿತಿಯನ್ನು ನೀಡಿದರು.

ಪ್ರಮಾಣ ಪತ್ರ ವಿತರಣೆ:
ಸಂಸ್ಥೆಯಲ್ಲಿ ಕಂಪ್ಯೂಟರ್, ಪ್ರಾಕ್ಟಿಕಲ್ ಅಕೌಂಟಿಂಗ್ ಸೇರಿದಂತೆ ವಿವಿಧ ವಿಷಯಗಳ ಕುರಿತು ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಾಲಿನಿ ಕಶ್ಯಪ್ ರವರು ವಿತರಿಸಿ , ಅಭಿನಂದಿಸಿದರು.


ಸಂಸ್ಥೆಯ ತರಬೇತುದಾರ ಚಂದ್ರಕಾಂತ್ ರವರು ನಿರೂಪಿಸಿ , ತರಬೇತುದರರಾದ ಸ್ವಾತಿ, ಸ್ನೇಹ, ಸಿಬ್ಬಂದಿ ಮಿಥುನ್ ರೈ ರವರು ಸಹಕರಿಸಿದರು. ನವೋದಯ, ಸೈನಿಕ ಶಾಲೆ ಸೇರಿದಂತೆ ವಿವಿಧ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗಳ ಪೂರ್ವ ಸಿದ್ದತಾ ತರಬೇತಿಯ ವಿದ್ಯಾರ್ಥಿಗಳು , ಸಶಸ್ತ್ರ ಪಡೆಗಳ ನೇಮಕಾತಿ ಪೂರ್ವ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು, ಪೋಷಕರು,ಸಂಸ್ಥೆಯ ತರಬೇತುದಾರರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

LEAVE A REPLY

Please enter your comment!
Please enter your name here