ಕೆಪಿಎಸ್ ಕೆಯ್ಯೂರಿನಲ್ಲಿ ವಿದ್ಯಾರ್ಥಿ ಸಂಸತ್ತಿನ ಪದಗ್ರಹಣ

0

ಕೆಯ್ಯೂರು: ಕೆಪಿಎಸ್ ಕೆಯ್ಯೂರಿನ ಪ್ರೌಢಶಾಲಾ ವಿಭಾಗದಲ್ಲಿ 2025-26ನೇ ಸಾಲಿನ ವಿದ್ಯಾರ್ಥಿ ಸಂಸತ್ತಿನ ನಾಯಕ ಹಾಗೂ ಉಪನಾಯಕ ಸ್ಥಾನಗಳಿಗೆ ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆ ನಡೆಯಿತು.

ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ನಾಮಪತ್ರ ಸಲ್ಲಿಸಿದರು. ಚುನಾವಣಾ ಪ್ರಚಾರ ಮಾಡಿ ಭಾಷಣ ಮಾಡಿದರು. ಮೊಬೈಲ್ ಅಪ್ಲಿಕೇಶನ್ ನ ಈವಿಎಂ ಯಂತ್ರ ಬಳಸಿ ಚುನಾವಣೆ ನಡೆಸಲಾಯಿತು. ಕಂಟ್ರೋಲ್ ಯೂನಿಟ್, ಬ್ಯಾಲೆಟ್ ಯೂನಿಟ್ ಹಾಗೂ ವಿವಿಪ್ಯಾಟ್ ಗಳನ್ನು ಹೊಂದಿರುವ ಈ ಅಪ್ಲಿಕೇಶನ್ ಮೂಲಕ ವಿದ್ಯಾರ್ಥಿಗಳು ಮತ ಚಲಾಯಿಸಿ ನೈಜ ಚುನಾವಣೆಯ ಅನುಭವ ಪಡೆದರು.

ಮುಖ್ಯಮಂತ್ರಿಯಾಗಿ 10ನೇ ತರಗತಿಯ ಭವಿತ್ ಕುಮಾರ್ ಹಾಗೂ ಉಪಮುಖ್ಯಮಂತ್ರಿಯಾಗಿ 9ನೇ ತರಗತಿಯ ಅಹಮ್ಮದ್ ಫಯಾಜ್ ಬಹುಮತದೊಂದಿಗೆ ಆಯ್ಕೆಯಾದರು. ಮಂತ್ರಿಮಂಡಲದ ಇತರ ಸದಸ್ಯರನ್ನು ಶಿಕ್ಷಕರು ಆಯ್ಕೆ ಮಾಡಿದರು. ಸಭಾಪತಿಯಾಗಿ ರಮ್ಲತ್ ಬೀವಿ, ಗೃಹ ಮಂತ್ರಿಯಾಗಿ ಧನುಷ್ ಕೆ.ಸಿ, ಸುಶಾಂತ್, ಮಹಮ್ಮದ್ ಆಬಿದ್, ಶಿಕ್ಷಣ ಮಂತ್ರಿಯಾಗಿ ನಿಶಾಂತ್, ಪೂಜಾಶ್ರೀ ಡಿ, ನಿಶಾ ಡಿ ಪಿ. ವಾರ್ತಾ ಮತ್ತು ಪ್ರಚಾರ ಮಂತ್ರಿಯಾಗಿ ಫಾತಿಮತ್ ನಾಫಿರಾ, ಚಿಂತನಾ,ಅನ್ವಿತಾ ರೈ, ಶಿಸ್ತು ಮತ್ತು ಸ್ವಚ್ಛತಾ ಮಂತ್ರಿಯಾಗಿ ಆಯುಷತ್ ಸಾಯಿರಾ, ಕೀರ್ತನಾ,ಸ್ಮಿತಾ ಹಾಗೂ ಮಹಮ್ಮದ್ ತೌಸಿಫ್, ಆಹಾರ ಮಂತ್ರಿಯಾಗಿ ಮಹಮ್ಮದ್ ಅನ್ಸಿಫ್, ದೀಕ್ಷಿತ್ ರೈ, ಮಹಮ್ಮದ್ ಅಂಜಾದ್, ಪಿ ಬಿ ಭವಿತ್, ಕ್ರೀಡಾ ಮಂತ್ರಿಯಾಗಿ ಹಿಮೇಶ್, ಫಾತಿಮತ್ ಶಮ್ನ, ಆಯಿಷತ್ ಶಿಫಾನ, ಸಾಂಸ್ಕೃತಿಕ ಮಂತ್ರಿಯಾ ಅನ್ಮೋಲ್ ಕೆ ವಿ, ಅನುಷಾ, ಸಿಂಧೂರ, ಆರೋಗ್ಯ ಮಂತ್ರಿಯಾಗಿ ತನುಷಾ ಡಿಸೋಜಾ, ಸುಕ್ಷಿತ್, ದಿಶಾ ಎಂ ಡಿ, ತೋಟಗಾರಿಕೆಯಾಗಿ ಸನ್ಮಿತ್, ಮೋಕ್ಷಿತ್ ಹಾಗೂ ದರ್ಶನ್, ನೀರಾವರಿ ಮಂತ್ರಿಯಾಗಿ ತನುಷ್, ರಯಾನುಲ್ಲ ಶರೀಫ್, ಮಹಮ್ಮದ್ ಸಂಶೀರ್, ಇವರನ್ನು ಆಯ್ಕೆ ಮಾಡಲಾಯಿತು. ಚುನಾವಣಾ ಸಾಕ್ಷರತಾ ಕ್ಲಬ್ ನ ಸಂಚಾಲಕರಾದ ಶಿಕ್ಷಕಿ ಮೋಲಿ ವಿಲ್ಮಾ ಪಿಂಟೊ ರವರು ಉಪಪ್ರಾಂಶುಪಾಲರಾದ ವಿನೋದ್ ಕುಮಾರ್ ಕೆ ಎಸ್ ರವರ ನಿರ್ದೇಶನದಂತೆ, ಶಿಕ್ಷಕ ವೃಂದದ ಸಹಕಾರದೊಂದಿಗೆ ಚುನಾವಣೆ ನಡೆಯಿತು.

ಪೋಷಕರ ಸಭೆಯ ಸಂದರ್ಭದಲ್ಲಿ ನೂತನ ಮಂತ್ರಿಮಂಡಲದ ಪ್ರಮಾಣ ವಚನ ಕಾರ್ಯಕ್ರಮ ನಡೆಯಿತು. ಕೆಯ್ಯೂರು ಕೆಪಿಎಸ್ ನ,  ಎಸ್ ಡಿಎಂಸಿ ಕಾರ್ಯಧ್ಯಕ್ಷ ಎ ಕೆ ಜಯರಾಮ ರೈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಾಂಶುಪಾಲರಾದ ಹಸೀನಾ ಬಾನು ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲ ವಿನೋದ್ ಕುಮಾರ್ ಕೆ ಎಸ್ ಪೋಷಕರಿಗೆ ಮಾಹಿತಿ ನೀಡಿದರು. ಶಿಕ್ಷಕಿ ಮೋಲಿ ವಿಲ್ಮಾ ಪಿಂಟೊ ರವರು ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಪ್ರಾಥಮಿಕ ಶಾಲಾ ಮುಖ್ಯಗುರುಗಳಾದ ಬಾಬು ಎಂ, ಗ್ರಾಮ ಪಂಚಾಯತ್ ಸದಸ್ಯೆ ಮೀನಾಕ್ಷಿ ವಿ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕರು ಹಾಗೂ ಪೋಷಕರು ಹಾಜರಿದ್ದರು. ಚಿತ್ರಕಲಾ ಶಿಕ್ಷಕರಾದ ಪ್ರಕಾಶ್ ಎನ್ ಸ್ವಾಗತಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕಿ ಜೆಸ್ಸಿ ಪಿ. ವಿ ನಿರೂಪಿಸಿದರು. ಗಣಿತ ಶಿಕ್ಷಕ  ಚಂದ್ರಶೇಖರ ಗೌಡ ವಂದಿಸಿದರು. 

LEAVE A REPLY

Please enter your comment!
Please enter your name here