ಅಂಕತಡ್ಕ-ಮಂಜುನಾಥನಗರ ಮೂಲಕ ಕೆ.ಎಸ್.ಆರ್.ಟಿ.ಸಿ.ಬಸ್ ಸಂಪರ್ಕಕ್ಕೆ ಗ್ರಾಮಸ್ಥರಿಂದ ಮನವಿ

0

ಸವಣೂರು: ಮಾಡಾವು- ಅಂಕತಡ್ಕ- ಮಂಜುನಾಥನಗರ ಮೂಲಕ ಪುತ್ತೂರು/ಕಡಬ ಸಂಪರ್ಕಕ್ಕೆ ಕೆ.ಎಸ್.ಆರ್.ಟಿ.ಸಿ.ಬಸ್ ಸಂಚಾರ ವ್ಯವಸ್ಥೆ ಕಲ್ಪಿಸುವಂತೆ ಪಾಲ್ತಾಡಿ ಗ್ರಾಮಸ್ಥರು ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಅಮಲಿಂಗಯ್ಯ ಹೊಸಪೂಜಾರಿ ಅವರಿಗೆ ಮನವಿ ಸಲ್ಲಿಸಿದರು.

ಕಡಬ ತಾಲೂಕಿನ ಪಾಲ್ತಾಡಿ ಗ್ರಾಮದ ಮಂಜುನಾಥ ನಗರ ಎಂಬ ಭಾಗವು ಅಭಿವೃದ್ಧಿ ಹೊಂದುತ್ತಿದ್ದು, ಮುಂದುವರಿದ ಭಾಗವಾಗಿ ವಿದ್ಯಾರ್ಥಿಗಳಿಗೆ ಶಿಕ್ಷಕರಿಗೆ ಸಾರ್ವಜನಿಕರಿಗೆ ಸಂಚಾರಕ್ಕೆ ಬಸ್ ವ್ಯವಸ್ಥೆಗಾಗಿ ಸಂಭಂದಪಟ್ಟ ಇಲಾಖೆಗೆ ಮನವಿ ನೀಡಲಾಯಿತು.

ಮಾಡಾವು-ಅಂಕತಡ್ಕ-ಬಂಬಿಲ-ಸವಣೂರು-ಪುತ್ತೂರು/ ಕಡಬ ಹಾಗೂ ಪೆರ್ಲಂಪಾಡಿ-ಮಾಡಾವು-ಅಂಕತಡ್ಕ-ಬಂಬಿಲ-ಸವಣೂರು-ಪುತ್ತೂರು/ ಕಡಬ ಮತ್ತು ಸವಣೂರು-ಬಂಬಿಲ-ಅಂಕತಡ್ಕ-ಮಾಡಾವು-ಪುತ್ತೂರು ರಸ್ತೆಯ ಮೂಲಕ ಬಸ್ ಸಂಚರಿಸುವಂತೆ ಮನವಿ ಮಾಡಿದರು.

ಈ ಸಂಧರ್ಭ ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಂದರಿ ಬಿ.ಯಸ್., ಸುಳ್ಯ ಮಂಡಲ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಇಂದಿರಾ ಬಿ.ಕೆ, ಸವಣೂರು ಗ್ರಾಮ ಪಂಚಾಯತ್ ಸದಸ್ಯರಾದ ಸತೀಶ್ ಅಂಗಡಿಮೂಲೆ, ಹರಿಕಲಾ ರೈ ಕುಂಜಾಡಿ, ವಿನೋದಾ ರೈ ಚೆನ್ನಾವರ, ಮಂಜುನಾಥನಗರ ಶ್ರೀ ಸಿದ್ದಿವಿನಾಯಕ ಸೇವಾ ಸಂಘದ ಅಧ್ಯಕ್ಷ ಪ್ರವೀಣ್ ಬಂಬಿಲ ದೋಳ, ವಿವೇಕಾನಂದ ಯುವಕ ಮಂಡಲದ ಗೌರವಾಧ್ಯಕ್ಷ ಅನ್ನಪೂರ್ಣ ಪ್ರಸಾದ್ ರೈ ಬೈಲಾಡಿ, ಕಾರ್ಯದರ್ಶಿ ಸತ್ಯಪ್ರಕಾಶ್ ಶೆಟ್ಟಿ, ಸದಸ್ಯರಾದ ಸುರೇಶ್ ಬಂಬಿಲದೋಳ, ರಕ್ಷಿತ್ ಬಂಬಿಲ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here