ಪುತ್ತಿಲ ಪರಿವಾರ ವಾಟ್ಸಾಪ್ ಗ್ರೂಪ್ ನಲ್ಲಿ ಮಾನಹಾನಿಕರ ಸಂದೇಶ ರವಾನಿಸಿದ ಪ್ರಕರಣ – ಆರೋಪಿಯಿಂದ ಕ್ಷಮೆಯಾಚನೆ ಕೋರಿ ಅಫಿದಾವಿತ್ ಸಲ್ಲಿಕೆ – ಕೇಸು ಹಿಂಪಡೆದ ದೂರುದಾರರು

0

ಪುತ್ತೂರು: ಸಾಮಾಜಿಕ ಜಾಲತಾಣವೊಂದರಲ್ಲಿ ಸಂದೇಶ ರವಾನೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮೆಟ್ಟಿಲೇರಿರುವ ಪ್ರಕರಣವೊಂದರಲ್ಲಿ ಆರೋಪಿತರು ನ್ಯಾಯಾಲಯಕ್ಕೆ ಹಾಜರಾಗಿ ತನ್ನ ತಪ್ಪಿನ ಮತ್ತು ಅಪರಾಧದ ಬಗ್ಗೆ ಕ್ಷಮೆ ಕೇಳುವ ಅಫಿದಾವಿತ್ ಸಲ್ಲಿಸುವ ಮೂಲಕ ಪ್ರಕರಣ ಇತ್ಯರ್ಥಗೊಂಡಿದೆ.

ಪುತ್ತಿಲ ಪರಿವಾರ ವಿಟ್ಲ ಎಂಬ ವಾಟ್ಸಪ್ ಗ್ರೂಪ್ ನಲ್ಲಿ 2024 ಜೂ.10ರಂದು ಪುತ್ತಿಲ ಪರಿವಾರದ ಪ್ರಮುಖರಾಗಿ ಗುರುತಿಸಿಕೊಂಡಿದ್ದ, ಪ್ರಸ್ತುತ ಪುತ್ತೂರು ಬಿಜೆಪಿ ಮಂಡಲ ಓಬಿಸಿ ಕಾರ್ಯದರ್ಶಿಯಾಗಿರುವ ಹರೀಶ್ ಮರುವಾಳ ರವರು “ಪುತ್ತಿಲ ಪರಿವಾರವನ್ನು ಅಲಕ್ಕ ಲಗಾಡಿ ತೆರೆಯಲು ಹೊರಟ್ಟಿದ್ದ ನಮ್ಮ ಪ್ರೀತಿಯ ವಕೀಲರಾದ ಶಿವಾನಂದ ಮಡಿವಾಳ ಇವರಿಗೆ ಹುಟ್ಟುಹಬ್ಬದ ಶುಭಾಶಯಗಳು” ಎಂಬ ಸಂದೇಶವನ್ನು ಅವರ ಫೋಟೋ ಸಹಿತ ಹಾಕಿದ್ದರೆನ್ನಲಾಗಿದೆ. ಈ ವಿಚಾರ ಭಾರೀ ವೈರಲ್ ಆಗಿತ್ತು. ಈ‌ ವಿಚಾರಕ್ಕೆ ಸಂಬಂಧಿಸಿದ ವಕೀಲರಾದ ಎಂ. ಶಿವಾನಂದರವರು ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿ, ಸಂದೇಶ ರವಾನಿಸಿದ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಕೋರ್ಟ್ ಮೆಟ್ಟಿಲೇರಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಜು.7ರಂದು ನ್ಯಾಯಾಯಕ್ಕೆ ಹಾಜರಾದ ಹರೀಶ್ ಮರುವಾಳ ರವರು ತಮ್ಮ ವಕೀಲರ ಮುಖಾಂತರ ತೆರೆದ ನ್ಯಾಯಾಲಯದಲ್ಲಿ ಕ್ಷಮೆಯಾಚನೆ ಕೋರಿ ಅಫಿದಾವಿತ್ ಸಲ್ಲಿಸಿದ್ದಾರೆ. ಆರೋಪಿಯು ನ್ಯಾಯಾಲಯದಲ್ಲಿ ಹಾಜರಾಗಿ ತನ್ನ ತಪ್ಪಿನ ಮತ್ತು ಅಪರಾಧದ ಬಗ್ಗೆ ಕ್ಷಮೆ ಕೇಳುವ ಅಫಿದಾವಿತ್ ಸಲ್ಲಿಸುತ್ತಿದ್ದರಿಂದ ದೂರುದಾರರಾದ ಎಂ ಶಿವಾನಂದರವರು ಈ ಕೇಸನ್ನು ಹಿಂಪಡೆದಿದ್ದಾರೆ ಎಂದು ಮಾಹಿತಿ ಲಭಿಸಿದೆ.

LEAVE A REPLY

Please enter your comment!
Please enter your name here