ವಿಟ್ಲ ಡಿ’ ಗ್ರೂಪ್ ಸಂಸ್ಥೆಯ ಸಾಧನೆಯ ಕೈಪಿಡಿ ಬಿಡುಗಡೆ

0

ಈ ಸಂಘಟನೆ ಇತರರಿಗೆ ಮಾದರಿ: ಹಸನ್ ವಿಟ್ಲ

ವಿಟ್ಲ: ಕಳೆದ ಹದಿನಾರು ವರ್ಷಗಳಿಂದ ಜನಸೇವೆಯನ್ನು ಮಾಡುತ್ತಿರುವ ವಿಟ್ಲದ ಡಿ” ಗ್ರೂಪ್ ಸಂಸ್ಥೆಯ ಸಾಧನೆಯ ಕೈಪಿಡಿ ಯನ್ನು ನಿವೃತ್ತ ತಹಶೀಲ್ದಾರ್ ಹಸನ್ ವಿಟ್ಲರವರು ಸಂಸ್ಥೆಯ ಕಚೇರಿಯಲ್ಲಿ ಬಿಡುಗಡೆಗೊಳಿಸಿದರು. ಡಿ’’ಗ್ರೂಪ್ ಅಧ್ಯಕ್ಷ ಶಾಕಿರ್ ಅಳಕೆಮಜಲು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.


ಇದೇ ಸಂದರ್ಭದಲ್ಲಿ ಪ್ರೌಢ ಶಾಲಾ ವಿಭಾಗದ ರಾಷ್ಟ್ರೀಯ ಮಟ್ಟದ ಕಬಡ್ಡಿ ತಂಡದ ಆಟಗಾರನಾಗಿ ಆಯ್ಕೆಯಾದ ಶಾಹಿಲ್ ಕೊಡಂಗೆ ವಿಟ್ಲರವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಹಸನ್ ವಿಟ್ಲ ಅವರು ” ಕೆಲವು ಸಂಘಟನೆಗಳು ಹುಟ್ಟಿದಷ್ಟೇ ವೇಗದಲ್ಲಿ ಮಾಯವಾಗುತ್ತದೆ.‌ ಆದರೆ ಡಿ’ ಗ್ರೂಪ್ ಸಂಘಟನೆ ಕಳೆದ ಹದಿನಾರು ವರ್ಷಗಳಿಂದ ಬಡವರ, ನಿರ್ಗತಿಕರ ಸೇವೆ ಮಾಡುವ ಮೂಲಕ ಉಳಿದ ಸಂಘಟನೆಗಳಿಗೆ ಮಾದರಿಯಾಗಿದೆ.ಜಾತಿ‌ ಮತ ಬೇಧವಿಲ್ಲದೆ ಮಾನವರ ಸೇವೆ ಮಾಡುವ ಡಿ ‘ ಗ್ರೂಪ್ ಶತಮಾನೋತ್ಸವವನ್ನು ಆಚರಿಸುವಂತಾಗಲಿ ಎಂದು ಶುಭ ಹಾರೈಸಿದರು.


ಗೌರವಾಧ್ಯಕ್ಷ ಝುಬೈರ್ ಮಾಸ್ಟರ್, ಗೌರವ ಸಲಹೆಗಾರ ಅಝೀಝ್ ಸನ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ಥಾಪಕ ಅಧ್ಯಕ್ಷ ಸಮದ್, ಉಪಾಧ್ಯಕ್ಷ ನೌಶೀನ್ ಬದ್ರಿಯ, ಕೋಶಾಧಿಕಾರಿ
ಬಶೀರ್ ಬೊಬ್ಬೆಕೇರಿ, ಜೊತೆ ಕಾರ್ಯದರ್ಶಿ ಇರ್ಷಾದ್ ಸೆಲೆಕ್ಟ್ ಸೇರಿದಂತೆ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ರಾಝಿಕ್ ಒಕ್ಕೆತ್ತೂರು ಸ್ವಾಗತಿಸಿದರು. ಖಲಂದರ್ ಪರ್ತಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here