ಜು.12: ಪರ್ಪುಂಜ ಬಾರಿಕೆ ನಾರಾಯಣ ರೈ- ದೇವಕಿ ಎನ್ ರೈ ದಂಪತಿಗಳ ವೈವಾಹಿಕ ಜೀವನದ ಸುವರ್ಣ ಮಹೋತ್ಸವ

0

ಪುತ್ತೂರು: ಹಿರಿಯ ಸಹಕಾರಿ ಧುರೀಣ, ಸಾಮಾಜಿಕ, ರಾಜಕೀಯ ಮುಂದಾಳು ಪರ್ಪುಂಜ ಬಾರಿಕೆ ನಾರಾಯಣ ರೈ ಮತ್ತು ದೇವಕಿ ಎನ್ ರೈ ರವರ ದಾಂಪತ್ಯ ಜೀವನದ 50ನೇ ವರ್ಷಾಚರಣೆಯು ಜು.12ರಂದು ನಡೆಯಲಿದೆ.


ನಾರಾಯಣ ರೈ ಪರ್ಪುಂಜ ಬಾರಿಕೆರವರು ಸಂಟ್ಯಾರು, ಲಿಟ್ಲ್ ಫ್ಲವರ್ ನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಸಂತ ಫಿಲೋಮಿನಾ ಫ್ರೌಢಶಾಲೆಯಲ್ಲಿ ಫ್ರೌಢ ಶಿಕ್ಷಣವನ್ನು ಪೂರೈಸಿ, ಮಡಿಕೇರಿಯಲ್ಲಿ ಜೆಡಿಸಿ ಕೋರ್ಸ್‌ನ್ನು ಮಾಡಿರುತ್ತಾರೆ, 1968-70 ಸಾಲಿನಲ್ಲಿ ಕೆಮ್ಮಿಂಜೆ ಸೇವಾ ಸಹಕಾರಿ ಮತ್ತು ಗಣಪತಿ ಸೇವಾ ಸೇವಾ ಸಹಕಾರಿ ಕೆಮ್ಮಣ್ಣು-ಉಡುಪಿಯಲ್ಲಿ ಮುಖ್ಯಕಾರ್‍ಯನಿರ್ವಹಣಾಧಿಕಾರಿಯಾಗಿದ್ದರು. 1975ರಲ್ಲಿ ಸುಳ್ಯ ತಾಲೂಕಿನ ದೇವಚಳ್ಳ ಸಹಕಾರಿ ಸಂಘದಲ್ಲಿ ಮುಖ್ಯ ಕಾರ್‍ಯನಿರ್ವಹಣಾಧಿಕಾರಿಯಾಗಿದ್ದರು. 1975ರ ಬಳಿಕ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡ, ಇವರು 1985ರಲ್ಲಿ ರಾಮಯ್ಯ ನಾೖಕ್ ವಿಟ್ಲ ರವರ ನೇತೃತ್ವದಲ್ಲಿ ಜನತಾದಳ ಪಕ್ಷ ಸೇರಿ 30 ವರ್ಷಗಳ ಕಾಲ ಪಕ್ಷದ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದರು.

ಪುತ್ತೂರು ತಾಲೂಕು ಅಕ್ರಮ-ಸಕ್ರಮ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. 15 ವರ್ಷಗಳ ಪುತ್ತೂರಿನಲ್ಲಿ ಮಲೆನಾಡು ಹಾಲು ಉತ್ಪಾದಕರ ಒಕ್ಕೂಟದ ಮುಖ್ಯ ಕಾರ್‍ಯನಿರ್ವಹಣಾಧಿಕಾರಿಯಾಗಿದ್ದರು. ಪರ್ಪುಂಜ ಹಾಲು ಉತ್ಪಾದಕರ ಸಹಕಾರ ಸಂಘದ ಸ್ಥಾಪಕಾಧ್ಯಕ್ಷರಾಗಿದ್ದರು. ಒಳಮೊಗರು ಬಂಟರ ಸಂಘದ ಅಧ್ಯಕ್ಷರಾಗಿ ಮತ್ತು ತಾಲೂಕು ಬಂಟರ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಇವರು ತಮ್ಮ ಕೃಷಿ ಕ್ಷೇತ್ರದ ಸಾಧನೆಗಾಗಿ ತಾಲೂಕು ಬಂಟರ ಸಂಘದ ವತಿಯಿಂದ ಕಡಮಜಲು ಸುಭಾಸ್ ರೈ ಪ್ರಾಯೋಜಕತ್ವದ ಸಿರಿಕಡಮಜಲು ಕೃಷಿ ಪ್ರಶಸ್ತಿಯನ್ನು ಚಿನ್ನದ ಪದಕದೊಂದಿಗೆ ಪಡೆದಿರುತ್ತಾರೆ.

LEAVE A REPLY

Please enter your comment!
Please enter your name here