ವಿಟ್ಲ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಜನ್ಮದಿನೋತ್ಸವ – ಗ್ರಾಮೋತ್ಸವದ ಪ್ರಯುಕ್ತ ಜಸ್ಟಿಸ್ ಕೆ. ಎಸ್. ಹೆಗ್ಡೆ ಚ್ಯಾರಿಟೇಬಲ್ ಆಸ್ಪತ್ರೆ,
ದೇರಳಕಟ್ಟೆ ಎ.ಬಿ. ಶೆಟ್ಟಿ ಸ್ಮಾರಕ ದಂತ ವೈದ್ಯಕೀಯ, ಮಹಾವಿದ್ಯಾಲಯ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು, ಒನ್ಸೈಟ್ ಎಸ್ಪಿಲಾರ್ ಲಕ್ಸೋಟಿಕ್ ಫೌಂಡೇಶನ್ ಬೆಂಗಳೂರು, ವೆನ್ಲಾಕ್ ಜಿಲ್ಲಾ ಆಸ್ಪತ್ರೆ, ಮಂಗಳೂರು, ಜಿಲ್ಲಾ ಆಯುಷ್ ಇಲಾಖೆ ಮಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಅಂಧತ್ವ ವಿಭಾಗ,
ಪ್ರಾಥಮಿಕ ಆರೋಗ್ಯ ಕೇಂದ್ರ ಕನ್ಯಾನ, ಇದರ ಜಂಟಿ ಸಹಯೋಗದಲ್ಲಿ ಜು.13ರಂದು ಬೆಳಗ್ಗೆ 9ಗಂಟೆಯಿಂದ ಬೃಹತ್ ವೈದ್ಯಕೀಯ ಸೇವಾ ಶಿಬಿರ ನಡೆಯಲಿದೆ.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ. ಸಾಧ್ವೀ ಶ್ರೀ ಮಾತಾನಂದಮಯಿ ರವರು ದಿವ್ಯ ಸಾನಿಧ್ಯ ಕರುಣಿಸಲಿದ್ದಾರೆ. ಮಂಗಳೂರಿನ ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕರಾದ ನಾಡೋಜ ಡಾ. ಕೃಷ್ಣಪ್ರಸಾದ್ ಕೂಡ್ಲು , ಮಂಗಳೂರಿನ ವೆನ್ ಲಾಕ್ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ವಿಭಾಗದ ಮುಖ್ಯಸ್ಥರಾದ ಡಾ. ಶರತ್ ಕುಮಾರ್ ರಾವ್ ಜೆ., ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ ದೇರಳಕಟ್ಟೆಯ ತೀವ್ರ ನಿಗಾಘಟಕದ ವೈದ್ಯರಾದ ಡಾ. ನರೇಶ್ ರೈ ಕೆ.ಜಿ., ದೇರಳಕಟ್ಟೆ ಎ.ಬಿ. ಶೆಟ್ಟಿ ದಂತ ವೈದ್ಯಕೀಯ ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ಯಮ್.ಎಸ್. ರವಿ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಮಹಮ್ಮದ್ ಇಟ್ಬಾಲ್ , ಕನ್ಯಾನ ಪ್ರಾಥಮಿಕ ಆರೋಗ್ಯ ಕೇಂದ್ರದ
ವೈದ್ಯಾಧಿಕಾರಿ ಡಾ. ಐಶ್ವರ್ಯ , ಬೆಂಗಳೂರಿನ ಒನ್ಸೈಟ್ ಎಸ್ಪಿಲಾರ್ ಲಕ್ಸೋಟಿಕ್ ಫೌಂಡೇಶನ್ ನ ವ್ಯವಸ್ಥಾಪಕರಾದ ಧರ್ಮಪ್ರಸಾದ್ ರೈ ರವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಬೃಹತ್ ವೈದ್ಯಕೀಯ ಸೇವಾ ಶಿಬಿರದಲ್ಲಿ ಬೃಹತ್ ಹೃದಯ ತಪಾಸಣೆ, ಶಸ್ತ್ರ ಚಿಕಿತ್ಸಾ ತಪಾಸಣೆ, ಎಲುಬು ತಪಾಸಣೆ, ದಂತಚಿಕಿತ್ಸೆ, ಸ್ತ್ರೀರೋಗ ತಪಾಸಣೆ, ಮಕ್ಕಳ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ, ಉಚಿತ ನೇತ್ರ ತಪಾಸಣೆ ಹಾಗೂ ಚಿಕಿತ್ಸೆ, ಉಚಿತ ಕನ್ನಡಕ ವಿತರಣೆ, ಬೃಹತ್ ರಕ್ತದಾನ ಶಿಬಿರ, ಆಯುಷ್ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ, ರಕ್ತದೊತ್ತಡ-ಮಧುಮೇಹ ತಪಾಸಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.