@ಜಿ. ಎಸ್. ಹರೀಶ್ ಆರ್ಲಪದವು
ಪಾಣಾಜೆ ಗ್ರಾಮದ ಉಡ್ಡಂಗಳ ಎಂಬಲ್ಲಿ ರಸ್ತೆ ಬದಿ ಜು.17ರ ಮುಂಜಾನೆ ಗುಡ್ಡ ಜರಿದು, ಮರಗಳು ಬಿದ್ದು 6 ವಿದ್ಯುತ್ ಕಂಬಗಳು ಬಿದ್ದು ರಸ್ತೆ ಬಂದ್ ಆಗಿತ್ತು. ವಿದ್ಯುತ್ ಕೂಡ ಇಲ್ಲ. ಆ ಸಂದರ್ಭದಲ್ಲಿ ಆ ಮಾರ್ಗದ ಮಧ್ಯೆ ಯಾವುದೇ ವಾಹನ ಸಂಚಾರ ಇರದಿದ್ದುದು ಪುಣ್ಯ. ಇಲ್ಲಿ ಗುಡ್ಡ ಕುಸಿತದ, ಮರಗಳು ಬೀಳುವ ಶಬ್ದ ಕೇಳಿ ಹತ್ತಿರದ ಮನೆಯವರು, ಗುಡ್ಡದ ಮೇಲಿಂದ ಮನೆಯವರು ಬಂದು ಲೈಟ್ ಹಾಕಿ ನೋಡುವಾಗ ವಿದ್ಯುತ್ ಕಂಬಗಳು ಬಿದ್ದು ತಂತಿಗಳು ಮಾರ್ಗದಲ್ಲಿ ಬಿದ್ದು ಇರುವುದನ್ನು ಗಮನಿಸಿ ಒಂದು ಕಡೆ ಭಯ , ಜೋರು ಮಳೆ ಒಂದು ಕಡೆ ಆದ್ರೂ ಮೆಸ್ಕಾಂ ಅವ್ರಿಗೆ ಕರೆ ಮಾಡಿ ತಿಳಿಸಿ, ವಿದ್ಯುತ್ ಆಫ್ ಮಾಡಿಸಿದ್ರು. ಮರಗಳು ಅಲ್ಲೇ ಕೆಳಗಡೆ ಇದ್ದ ಪುರಾತನ ದೈವಸ್ಥಾನದ ಗುಡಿಯ ಮೇಲೇಯೂ ಬಿದ್ದು ಅದಕ್ಕೂ ಹಾನಿಯಾಗಿರುತ್ತದೆ. ಇದೀಗ ತೆರೆವು ಕಾರ್ಯಾಚರಣೆ ನಡೆಯುತಿದೆ.

ಈ ಬಿರುಸಿನ ಮಳೆಯ ನಡೆಯುವ ಒಂದು ಕಡೆ ಹೊಸದಾಗಿ ವಿದ್ಯುತ್ ಕಂಬಗಳ ಅಳವಡಿಕೆ, ಒಂದು ಕಡೆ ರಸ್ತೆಗಳಿಗೆ ಬಿದ್ದ ಮರಗಳ ಮಣ್ಣುಗಳ ತೆರವು ಕೆಲಸ ಕಾರ್ಯಗಳು ನಡೆಯುತ್ತಿರುವುದು ಶ್ಲಾಘನೀಯ. ಪಂಚಾಯತ್ ಅಧ್ಯಕ್ಷರು, ಪಿಡಿಓ, ಅರಣ್ಯ ಇಲಾಖೆಯ ಅಧಿಕಾರಿಗಳು, ಮೆಸ್ಕಾಂ ಅಧಿಕಾರಿಗಳು, ಲೈನ್ ಮ್ಯಾನ್ ಗಳು, ಊರಿನ ಜನರು ಈ ಸ್ಥಳದಲ್ಲಿದ್ದು, ಎಲ್ಲ ಕೆಲಸ ಕಾರ್ಯಗಳು ನಡೆಯುವಲ್ಲಿ ಬೇಕಾದ ವ್ಯವಸ್ಥೆಯನ್ನು ಮಾಡುತಿದ್ದರೆ. ಈ ಜಾಗದಲ್ಲಿ ಮಳೆಗಾಲ ದಲ್ಲಂತೂ ಸದಾ ಮಣ್ಣು ಕುಸಿಯುತಿದೆ. ಅದೇ ಗುಡ್ಡೆಯ ಬದಿಯಲ್ಲಿ ಮೇಲ್ಗಡೆ ಒಂದು ಮನೆಯು ಇದ್ದು, ಅವರು ಭಯಭೀತರಾಗಿ ಮಳೆಗಾಲದಲ್ಲಿ ಮಲಗುವ ಪರಿಸ್ಥಿತಿಯಾಗಿದೆ. ಅಲ್ಲಿಯೇ ಮಾರ್ಗದ ಕೆಳಗಡೆ ಪುರಾತನ ದೈವಸ್ಥಾನದ ಗುಡಿಯೂ ಇದೆ. ಈ ಮಾರ್ಗ ಕೇರಳದಿಂದ ಪುತ್ತೂರು ಸಂಪರ್ಕ ರಸ್ತೆಯೂ ಆಗಿದ್ದು ಸಾವಿರಾರು ವಾಹನಗಳು ಸಂಚರಿಸುತಿದೆ.
ಆದುದರಿಂದ ಇದಕ್ಕೊಂದು ಶಾಶ್ವತ ತಡೆಗೋಡೆ ಅಥವಾ ಶಾಶ್ವತ ಪರಿಹಾರ ಆಗಲೇಬೇಕು ಅನ್ನೋದು ಸಾರ್ವಜನಿಕರ ಅಭಿಪ್ರಾಯ. ಇದಕ್ಕೆ ಜನಪ್ರತಿನಿಧಿಗಳು ಮನಸ್ಸು ಮಾಡಿ, ಇದಕ್ಕೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಕೈ ಜೋಡಿಸಿ ಇದಕ್ಕೆ ಶಾಶ್ವತ ಪರಿಹಾರ ಒದಗಿಸಿ ಅನ್ನೋದೇ ನಮ್ಮೆಲರ ಬೇಡಿಕೆ ವಿನಂತಿ. ಇಲ್ಲವಾದಲ್ಲಿ ಇದು ಮುಂದೊಂದು ದಿನ ದೊಡ್ಡ ಅಪಾಯಕ್ಕೆ ನಾವೇ ಆಹ್ವಾನ ನೀಡಿದಂತಾದೀತು.